ಬೆಂಗಳೂರು: ಜನವರಿ 14 ಮತ್ತು 15 ರಂದು ಹರಿಹರದಲ್ಲಿ (Harihara) ಹರ ಜಾತ್ರೆ ನಡೆಯಲಿದೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿಯವರು ತಿಳಿಸಿದ್ದಾರೆ.
ಹರಿಹರದಲ್ಲಿ ಹರ ಜಾತ್ರೆಯ ಜತೆಗೆ ಮೀಸಲಾತಿ ಜಾಗೃತಿ ಸಮಾವೇಶ ನಡೆಯಲಿದೆ ಎಂದು ಸ್ವಾಮೀಜಿಯವರು ತಿಳಿಸಿದರು.
ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಅದ್ದೂರಿ ಸಮಾವೇಶ ಮತ್ತು ಜಾತ್ರೆ ನಡೆಯಲಿದೆ. ಸಿದ್ದೇಶ್ವರ ಸ್ವಾಮಿಜೀಯವರಿಗೆ ನುಡಿ ನಮನ ಸಲ್ಲಿಸಲಾಗುವುದು. ಜತೆಗೆ ಮೀಸಲಾತಿ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ವಚಾನಂದಸ್ವಾಮೀಜಿ ಹೇಳಿದ್ದಾರೆ.