Site icon Vistara News

Honnali News: ಹೊನ್ನಾಳಿ ಗೆಲುವಿಗೆ ಶ್ರಮ ವಹಿಸಿ: ಪ್ರಣತಿ ಸಿಂದ್ಯಾ

#image_title

ಹೊನ್ನಾಳಿ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಮಹಾರಾಷ್ಟ್ರದ ರಾಜಕೀಯ ನಾಯಕಿ ಪ್ರಣತಿ ಸಿಂದ್ಯಾ ಅವರು ಹೊನ್ನಾಳಿಗೆ ಭೇಟಿ ನೀಡಿ, ಕಾಂಗ್ರೆಸ್‌ ಮುಖಂಡರ ಜತೆ ಮಾತುಕತೆ ನಡೆಸಿದರು. ಕ್ಷೇತ್ರದಲ್ಲಿ ಮತದಾರರಿಗೆ ಕಾಂಗ್ರೆಸ್‌ ಬಗ್ಗೆ ಇರುವ ಒಲವಿನ ಬಗ್ಗೆ ತಿಳಿದುಕೊಂಡರು.

ನಗರದಲ್ಲಿರುವ ಡಿ.ಜಿ. ಶಾಂತನಗೌಡರ ಮಿಲ್ಲಿನಲ್ಲಿ ಅವರು ಕಾಂಗ್ರೆಸ್‌ ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನಲ್ಲಿ ಕಾಂಗ್ರೆಸ್‌ ಮಾಡಿರುವ ಅಭಿವೃದ್ಧಿ ಕೆಲಸಗಳು, ಪಕ್ಷದ ಸಾಧನೆಗಳ ಕುರಿತಾಗಿ ಪ್ರಣತಿ ಅವರು ಇದೇ ವೇಳೆ ವಿವರಣೆ ಪಡೆದುಕೊಂಡರು. ಪಕ್ಷದ ಪ್ರಣಾಳಿಕೆಯಲ್ಲಿರುವ ವಾರಂಟಿ ಕಾರ್ಡ್‌, ವಿದ್ಯುತ್‌ ಉಚಿತ ವಾರಂಟಿ ಕಾರ್ಡ್‌ಗಳ ಕುರಿತಾಗಿ ಹಾಗೆಯೇ ಪ್ರತಿ ಬೂತ್‌ ಮಟ್ಟದಲ್ಲಿಯೂ ಜನರಿಗೆ ಮಾಹಿತಿ ಕೊಟ್ಟು ವಾರಂಟಿ ಕಾರ್ಡ್‌ಗಳನ್ನು ಹಸ್ತಾಂತರಿಸಿರುವ ಬಗ್ಗೆ ಯಾವ ರೀತಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂಬ ಬಗ್ಗೆ ಮುಖಂಡರು ಮಾಹಿತಿ ನೀಡಿದರು.

ಪಕ್ಷವು ಇನ್ನೂ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನು ಘೋಷಿಸಿಲ್ಲ. ಒಂದು ವೇಳೆ ಅದು ಘೋಷಣೆಯಾದರೆ ಇನ್ನಷ್ಟು ಅನುಕೂಲವಾಗುತ್ತದೆ. ಅಭ್ಯರ್ಥಿ ಘೋಷಣೆಯಾಗದೆ ಪ್ರಚಾರ ಮಾಡುವುದು ಕಷ್ಟವಾಗುತ್ತದೆ ಎಂದು ಮುಖಂಡರು ಈದೇ ವೇಳೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

ಹೊನ್ನಾಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸ್ಪರ್ಧೆ ಕಠಿಣವಾಗಿದ್ದು, ಎರಡೂ ಪಕ್ಷಗಳಿಗೆ 50-50 ಸಾಧ್ಯತೆ ಗೆಲುವಿನ ಸಾಧ್ಯತೆಯಿದೆ ಎಂದು ಮುಖಂಡರು ಅಭಿಪ್ರಾಯ ಹೇಳಿಕೊಂಡಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಣತಿ, ನೀವು ಗೆಲುವಿನ ಸಾಧ್ಯತೆಯನ್ನು 75-25ಕ್ಕೆ ತರಬೇಕು. ಈ ನಿಟ್ಟಿನಲ್ಲಿ ಎಲ್ಲ ಕಾರ್ಯಕರ್ತರೊಡಗೂಡಿ ಶ್ರಮಿಸಬೇಕು. ಅಭ್ಯರ್ಥಿ ಘೋಷಣೆಯಾಗಲಿ ಎಂದು ಕಾಯುತ್ತಾ ಕೂರಬಾರದು, ತಾಲೂಕಿನಲ್ಲಿ ಪ್ರಚಾರವನ್ನು ಚುರುಕುಗೊಳಿಸಬೇಕು ಎಂದು ಅವರು ಹೇಳಿದರು.

Exit mobile version