Site icon Vistara News

Karnataka Election: ಹೊನ್ನಾಳಿಯಲ್ಲಿ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಜಿ. ಶಾಂತನಗೌಡ

#image_title

ಹೊನ್ನಾಳಿ: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿರುವ (Karnataka Election) ಡಿ.ಜೆ. ಶಾಂತನಗೌಡ ಮಂಗಳವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಜಿಲ್ಲಾ ಪಂಚಾಯಿತಿ ಕಾಂಗ್ರೆಸ್‌ ಅಧ್ಯಕ್ಷರಾದ ಎಚ್‌.ಬಿ. ಮಂಜಪ್ಪ ಸೇರಿ ಅನೇಕ ಮುಖಂಡರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಎಚ್.ಬಿ. ಮಂಜಪ್ಪ, ಬಿಜೆಪಿಯದ್ದು 40% ಸರ್ಕಾರವಾಗಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಪರ ಆಡಳಿತ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡಲಿದೆ. ಪ್ರತಿ ಮನೆಗೆ 200 ಯುನಿಟ್‌ ವಿದ್ಯುತ್‌, 10 ಕೆಜಿ ಅನ್ನಭಾಗ್ಯ, ಮನೆ ಯಜಮಾನಿಗೆ 2000 ರೂ. ಮಾಸಿಕ ಧನಸಹಾಯದ ಯೋಜನೆಗಳನ್ನು ಜಾರಿಗೆ ತರಲಿದೆ ಎಂದು ತಿಳಿಸಿದರು.

ಅಲ್ಲದೆ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ನಿರುದ್ಯೋಗಿ ಪದವೀಧರ ಯುವಕರಿಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 1500 ರೂ. ಸಹಾಯಧನ ನೀಡಲಾಗುವುದು. ಈ ಎಲ್ಲ ಯೋಜನೆಗಳು ಕಾಂಗ್ರೆಸ್‌ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲೇ ಜಾರಿಗೆ ಬರಲಿವೆ ಎಂದು ಅವರು ತಿಳಿಸಿದರು.

ಹೊನ್ನಾಳಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವ ಬಗ್ಗೆ ಅನುಮಾನವಿಲ್ಲ ಎಂದು ಅವರು ಶಾಂತನಗೌಡ ಅವರನ್ನು ಅಧಿಕ ಅಂತರದಿಂದ ಗೆಲ್ಲಿಸೋಣ ಎಂದು ಕರೆ ನೀಡಿದರು.

ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ.ಸಿದ್ದಪ್ಪ ಮಾತನಾಡಿ, “ಟಿಕೆಟ್ ಕೇಳೋದು ನಮ್ಮ ಕರ್ತವ್ಯ. ಟಿಕೆಟ್ ಯಾರಿಗೆ ನೀಡಿದರೂ ದುಡಿದು ಅವರನ್ನು ಗೆಲ್ಲಿಸುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.

ವಿಧಾನ ಪರಿಷತ್ತಿನ ಸದಸ್ಯರಾದ ಅಬ್ದುಲ್ ಜಬ್ಬಾರ್ ಮಾತನಾಡಿ, “ಸರಳ ಸಜ್ಜನಿಕೆ ರಾಜಕಾರಣಿ ಡಿ.ಜಿ. ಶಾಂತನಗೌಡ ಅವರನ್ನು ಅತ್ಯಂತ ಅಧಿಕ ಮತಗಳಿಂದ ಗೆಲ್ಲಿಸಿ” ಎಂದು ಕೇಳಿಕೊಂಡರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್ ಮಾತನಾಡಿ “ಈ ಜನಸಾಗರ ನೋಡಿದರೆ ರೇಣುಕಾಚಾರ್ಯ ಗಂಟು ಮೂಟೆ ಕಟ್ಟೋದು ಫಿಕ್ಸ್” ಎಂದರು.

ಇದನ್ನೂ ಓದಿ: Honnali News: ಹೊನ್ನಾಳಿ ಗೆಲುವಿಗೆ ಶ್ರಮ ವಹಿಸಿ: ಪ್ರಣತಿ ಸಿಂದ್ಯಾ

ಅಭ್ಯರ್ಥಿ ಡಿ.ಜಿ. ಶಾಂತನಗೌಡ ಮಾತನಾಡಿ, “ರೇಣುಕಾಚಾರ್ಯ ಅವರು ಕೋಟಿಗಟ್ಟಲ್ಲೇ ಹಣವನ್ನು ಲೂಟಿ ಮಾಡಿದ್ದಾರೆ. ಕೋವಿಡ್ ಸಮಯದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಕಾರ್ಮಿಕರಿಗೆ, ಕೃಷಿ ಕಾರ್ಮಿಕರಿಗೆ ಬಂದ ಕಿಟ್‌ಗಳಲ್ಲಿಯೂ ಗೋಲ್ಮಾಲ್‌ ಮಾಡಿದ್ದಾರೆ. ಅಲ್ಪಸಂಖ್ಯಾತರು, ಕುರುಬರು, ಪರಿಶಿಷ್ಟ ಪಂಗಡದವರು ಶಾಸಕ ರೇಣುಕಾಚಾರ್ಯ ಅವರಿಗೆ ಯಾವ ಕಾರಣಕ್ಕೂ ಮತ ನೀಡಬೇಡಿ” ಎಂದು ಹೇಳಿದ್ದಾರೆ.

Exit mobile version