ಹೊನ್ನಾಳಿ: ಆರನೇ ಗ್ಯಾರಂಟಿ (6th Guarantee) ಜಾರಿಗೊಳಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು (Various Demands) ಈಡೇರಿಸುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ (ಎ.ಐ.ಟಿ.ಯು.ಸಿ) ಹೊನ್ನಾಳಿ/ನ್ಯಾಮತಿ ತಾಲೂಕು ಘಟಕದಿಂದ ಬೃಹತ್ ಪ್ರತಿಭಟನೆ (Protest) ಹಮ್ಮಿಕೊಳ್ಳಲಾಗಿತ್ತು.
ತಾಲೂಕು ಸೌಧದ ಎದುರು ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಹೊನ್ನಾಳಿ ಘಟಕದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಫೆಡರೇಷನ್ ನ ಅಧ್ಯಕ್ಷೆ ಚೆನ್ನಮ್ಮ ನೇತೃತ್ವ ವಹಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ 15 ಸಾವಿರ, ಸಹಾಯಕಿಯರಿಗೆ 10 ಸಾವಿರ ಹಾಗೂ ನಿವೃತ್ತಿಯಾದವರಿಗೆ ಇಡುಗಂಟು 3 ಲಕ್ಷ ನೀಡುವ ಭರವಸೆಯನ್ನು ರಾಜ್ಯ ಸರ್ಕಾರವು ಕೂಡಲೇ ಈಡೇರಿಸಬೇಕು
ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸಮಯಕ್ಕೆ ವೇತನ ನೀಡಬೇಕು, ಅಂಗನವಾಡಿ ಕೇಂದ್ರಗಳ ಬಾಕಿಯಿರುವ ಬಾಡಿಗೆ ಹಣವನ್ನು ನೀಡಬೇಕು ಎಂದು ಒತ್ತಾಯಿಸಿದರು.
ಇದನ್ನೂ ಓದಿ: Su 30MKI: ಮೇಕ್ ಇನ್ ಇಂಡಿಯಾಗೆ ಬಲ; ವಾಯುಪಡೆ ಸೇರಲಿವೆ 12 ಸು-30 ಎಂಕೆಐ ಯುದ್ಧವಿಮಾನ
ಶಿಶುಪಾಲನ ಕೇಂದ್ರವನ್ನು ಆರಂಭಿಸಿದಲ್ಲಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ, ಹಂತ ಹಂತವಾಗಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ, ಹೀಗಾಗಿ ಶಿಶುಪಾಲ ಕೇಂದ್ರವನ್ನು ಯಾವುದೇ ಸಂದರ್ಭದಲ್ಲಿ ಸಹ ಆರಂಭಿಸಬಾರದು, ಇದಕ್ಕೆ ನಮ್ಮ ವಿರೋಧವಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಗ್ರೇಡ್ ಟು ತಹಸಿಲ್ದಾರ್ ಸುರೇಶ್ ಅವರ ಮೂಲಕ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ಮನವಿ ಪತ್ರ ಸಲ್ಲಿಸಿದರು.
ಇದನ್ನೂ ಓದಿ: ಹಾಸನದಲ್ಲಿ ಕಾಡಾನೆಗಳ ಪರೇಡ್; ರಾಮನಗರದಲ್ಲಿ ಒಂಟಿ ಸಲಗ ನೈಟ್ ವಾಕ್, ಸೋಲಾರ್ ಬೇಲಿಗೂ ಡೋಂಟ್ ಕೇರ್!
ಈ ಸಂದರ್ಭದಲ್ಲಿ ಫೆಡರೇಷನ್‌ನ ಪದಾಧಿಕಾರಿಗಳಾದ ಶಾರದಾದೇವಿ, ರೇಣುಕಾ , ವಸಂತಮ್ಮ, ಗೀತಾ, ಸಹಾಯಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.