Site icon Vistara News

ಬಾಯಲ್ಲಿ ನೀರೂರಿಸುವ ದಾವಣಗೆರೆ ಬೆಣ್ಣೆ ದೋಸೆ ಸವಿದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ

ramya

ದಾವಣಗೆರೆ: ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್‌ ಆಗಿದ್ದ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ರಾಜಕೀಯದಿಂದ ದೂರ ಸರಿದ ಮೇಲೆ ನಿರ್ಮಾಪಕಿಯಾಗಿ ಕಂಬ್ಯಾಕ್‌ ಆಗಿದ್ದಾರೆ. ಈಗೀಗ ಸಾರ್ವಜನಿಕ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಹೆಡ್‌ ಬುಷ್‌ ಸಿನಿಮಾ ಪ್ರಿ ರಿಲೀಸ್‌ ಇವೆಂಟ್‌ಗಾಗಿ ದಾವಣಗೆರೆಗೆ ಬಂದಿದ್ದ ಇವರು, ದಾವಣಗೆರೆಯ ಫೇಮಸ್‌ ಬೆಣ್ಣೆ ದೋಸೆಯನ್ನು ಸವಿದಿದ್ದಾರೆ.

ಜಿಲ್ಲೆಯ ಡೆಂಟಲ್ ಕಾಲೇಜು ರಸ್ತೆಯಲ್ಲಿರುವ ಗುರು ಕೊಟ್ಟೂರೇಶ್ವರ ಬೆಣ್ಣೆ ದೋಸೆ ಹೋಟೆಲ್‌ನಲ್ಲಿ ಬೆಣ್ಣೆ ದೋಸೆಯನ್ನು ಸವಿದಿದ್ದಾರೆ. ಭಾನುವಾರ ಹೆಡ್ ಬುಷ್ ಸಿನಿಮಾ ಪ್ರಿ ರಿಲೀಸ್‌ ವೇದಿಕೆಯಲ್ಲಿ ರಮ್ಯಾ, ದಾವಣಗೆರೆಗೆ ಬಂದಿದ್ದೇನೆ, ಬೆಣ್ಣೆ ದೋಸೆ ತಿಂದೇ ಹೋಗುತ್ತೇನೆ ಎಂದಿದ್ದರು.

ಅದರಂತೆ ಸೋಮವಾರ ಬಿಸಿ ಬಿಸಿ ಬೆಣ್ಣೆ ದೋಸೆಯನ್ನು ಆರ್ಡರ್‌ ಮಾಡಿ ಟೇಸ್ಟ್‌ ಮಾಡಿದರು. ರಮ್ಯಾ ಜತೆಗೆ ನಿರ್ಮಾಪಕ ಕಾರ್ತಿಕ್ ಗೌಡ ಸಾಥ್ ನೀಡಿದರು. ಇತ್ತ ನೆಚ್ಚಿನ ನಟಿ ಹೋಟೆಲ್‌ಗೆ ಬಂದಿರುವುದು ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದರು. ಬ್ಲಾಕ್‌ ಟೀ ಶರ್ಟ್‌ನಲ್ಲಿ ಮಿಂಚುತ್ತಿದ್ದ ರಮ್ಯಾರ ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಇದನ್ನೂ ಓದಿ | Hondisi Bareyiri | ಓ ಕವನ ಹಾಡು ರಿಲೀಸ್ ಮಾಡಿದ ಸ್ಯಾಂಡಲ್‌ವುಡ್‌ ನಟಿ ರಮ್ಯಾ

Exit mobile version