Site icon Vistara News

Dead body in plastic | ಹೆಂಡತಿ ಶವ ಸಂಸ್ಕಾರಕ್ಕೆ ಹಣವಿಲ್ಲದೆ ಪರದಾಡಿದ ಪ್ರಕರಣ; ಅಂತ್ಯಸಂಸ್ಕಾರ ನೆರವೇರಿಸಿ ಮಾನವೀಯತೆ ಮೆರೆದ ಪೊಲೀಸರು

Dead body in plastic ಚಿಂದಿ ಆಯುವ ವ್ಯಕ್ತಿಯ ಪತ್ನಿ

ಚಾಮರಾಜನಗರ: ಕಷ್ಟವೋ ಸುಖವೋ ಚಿಂದಿ ಆಯುತ್ತಾ ದಾಂಪತ್ಯ ಜೀವನ ನಡೆಸುತ್ತಿದ್ದವರಿಗೆ ಬರ ಸಿಡಿಲು ಬಡಿದಿತ್ತು. ಅನಾರೋಗ್ಯದಿಂದ ಮೃತಪಟ್ಟಿದ್ದ ಪತ್ನಿಯ ಅಂತ್ಯಕ್ರಿಯೆಗೂ ಹಣವಿಲ್ಲದೆ ಶವವನ್ನು ಪ್ಲಾಸ್ಟಿಕ್‌ನಲ್ಲಿ ಕಟ್ಟಿ ಹೊತ್ತುಕೊಂಡೇ (Dead body in plastic) ತನ್ನ ಊರಿಗೆ ಹೊರಟಿದ್ದ ಕರುಣಾಜನ ಕಥೆ ಬೆಳಕಿಗೆ ಬಂದಿತ್ತು. ಈಗ ಈತನ ಕಷ್ಟವನ್ನು ನೋಡಲಾಗದೆ ಪೊಲೀಸರು ನೆರವು ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.

ನಗರದ ಕಂದಹಳ್ಳಿ ಸಮೀಪದ ರವಿ ಮತ್ತು ಕಾಳಮ್ಮ (೨೬) ಎಂಬುವವರು ವಾಸವಿದ್ದರು. ಇಬ್ಬರೂ ಪ್ಲಾಸ್ಟಿಕ್‌ ಮತ್ತು ಚಿಂದಿ ಆಯುವ ಕೆಲಸ ಮಾಡಿಕೊಂಡಿದ್ದರು. ಈ ನಡುವೆ, ಪತ್ನಿ ಕಾಳಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದರು. ಆದರೆ, ಆಕೆಯ ಮೃತದೇಹದ ಅಂತ್ಯ ಸಂಸ್ಕಾರ ನೆರವೇರಿಸಲು ರವಿ ಬಳಿ ಹಣವಿರಲಿಲ್ಲ. ಹೀಗಾಗಿ ಯಳಂದೂರು ಪೊಲೀಸರೇ ನಿಂತು ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.

ಯಳಂದೂರು ತಾಲೂಕಿನ ಕಾರಾಪುರ ಬಳಿಯ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಹಿಂದು ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿದ್ದು, ಯಳಂದೂರು ಸಬ್‌ಇನ್ಸ್ಪೆಕ್ಟರ್ ವೆಂಕಟೇಶ್, ಕಾನ್ಸ್‌ಟೇಬಲ್‌ಗಳಾದ ನಾಗೇಂದ್ರ, ರೇಖಾ ಮಹೇಶ್, ಚಾಲಕ ಸೋಮಣ್ಣ ಅಂತ್ಯಕ್ರಿಯೆ ನೆರವೇರಿಸಿದರು.

ಅಂತ್ಯ ಸಂಸ್ಕಾರಕ್ಕೆ ಹಣ ಇಲ್ಲದೆ ಪತ್ನಿಯ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಹೊತ್ತೊಯ್ಯುತ್ತಿದ್ದ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದಿದ್ದರು. ಮರಣೋತ್ತರ ಪರೀಕ್ಷೆ ನಂತರ ತಾವೇ ಶವಸಂಸ್ಕಾರ ನೆರವೇರಿಸಿದ್ದಾರೆ.

ಇದನ್ನೂ ಓದಿ | Kannada Flag | ತಮಿಳುನಾಡಿನಲ್ಲೂ ಕಿರಿಕ್; ಕನ್ನಡ ಬಾವುಟ ಕಟ್ಟಿದ್ದಕ್ಕೆ ಕನ್ನಡಿಗರ ವಾಹನಕ್ಕೆ ಕಲ್ಲು ತೂರಾಟ

Exit mobile version