Site icon Vistara News

IAF Fighter Jets Crash: ಮಧ್ಯಪ್ರದೇಶದಲ್ಲಿ ಐಎಎಫ್​ ವಿಮಾನ ಪತನ; ಮೃತಪಟ್ಟಿದ್ದು ಬೆಳಗಾವಿ ಮೂಲದ ವಿಂಗ್​ ಕಮಾಂಡರ್​

Deceased pilot of IAF fighter jets Crash is hails from the Belagavi

#image_title

ಬೆಳಗಾವಿ: ಇಂದು ಮಧ್ಯಪ್ರದೇಶದಲ್ಲಿ ವಾಯುಸೇನೆ ವಿಮಾನ ಪತನ (IAF Fighter Jets Crash) ಉಂಟಾಗಿ ಮೃತಪಟ್ಟ ಪೈಲೆಟ್​ನ್ನು ವಿಂಗ್​ ಕಮಾಂಡರ್​ ಹನುಮಂತರಾವ್​​ ಸಾರಥಿ ಎಂದು ಹೇಳಲಾಗಿದ್ದು, ಇವರು ನಮ್ಮ ಕರ್ನಾಟಕ ರಾಜ್ಯದ ಬೆಳವಾವಿ ಮೂಲದವರಾಗಿದ್ದಾರೆ.

ಇಂದು ಮುಂಜಾನೆ ಮಧ್ಯಪ್ರದೇಶದ ಗ್ವಾಲಿಯರ್​ ವಾಯುನೆಲೆಯಿಂದ ಟೇಕ್​ ಆಫ್ ಸುಖೋಯ್​ 30 ಮತ್ತು ಮಿರಾಜ್​ 2000- ಫೈಟರ್ ಜೆಟ್​ಗಳು ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದವು. ಇದರಲ್ಲಿ ಸುಖೋಯ್​ ವಿಮಾನ ಮಧ್ಯಪ್ರದೇಶದ ಮೊರೆನಾ ಬಳಿ ಬಿದ್ದಿದ್ದರೆ, ಮಿರಾಜ್​ 2000 ವಿಮಾನ ರಾಜಸ್ಥಾನದ ಭರತ್​ಪುರ ಬಳಿ ಪತನಗೊಂಡಿತ್ತು. ಸುಖೋಯ್​​ ವಿಮಾನದಲ್ಲಿದ್ದ ಇಬ್ಬರೂ ಪೈಲೆಟ್​ಗಳು ಬಚಾವಾಗಿದ್ದರು. ಆದರೆ ಮಿರಾಜ್​​ 2000 ವಿಮಾನದ ಪೈಲೆಟ್​ ಆಗಿದ್ದ ವಿಂಗ್​ ಕಮಾಂಡರ್​ ಹನುಮಂತರಾವ್ ಸಾರಥಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತೀಯ ವಾಯು ಸೇನಾಪಡೆ ‘ಮಿರಾಜ್​ ವಿಮಾನದಲ್ಲಿದ್ದ ಪೈಲೆಟ್​ ವಿಂಗ್​ ಕಮಾಂಡರ್ ಹನುಮಂತರಾವ್​ ಸಾರಥಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಾಗಿತ್ತು. ಆದರೆ ಬದುಕುಳಿಯಲಿಲ್ಲ. ಸುಖೋಯ್​​ನಲ್ಲಿದ್ದ ಇಬ್ಬರೂ ಪೈಲೆಟ್​ಗಳಿಗೆ ಚಿಕಿತ್ಸೆ ಮುಂದುವರಿದಿದೆ’ ಎಂದು ಹೇಳಿದೆ. ಹನುಮಂತರಾವ್ ಸಾರಥಿ ಬೆಳಗಾವಿ ಮೂಲದವರೆಂದಷ್ಟೇ ವಿಷಯ ಗೊತ್ತಾಗಿದ್ದು, ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.

ಇದನ್ನೂ ಓದಿ: IAF Fighter Jets Crash: ಪತನವಾಗಿದ್ದು ಮೂರಲ್ಲ, ಎರಡೇ ಯುದ್ಧ ವಿಮಾನಗಳು; ಒಬ್ಬ ಪೈಲೆಟ್​ ಸಾವು

Exit mobile version