Site icon Vistara News

Deepawali Nage Utsavsa: ಸ್ಟಾರ್ ಸುವರ್ಣದಲ್ಲಿ ನ.5ಕ್ಕೆ ʼದೀಪಾವಳಿ ನಗೆ ಉತ್ಸವʼ

deepawali Nage utsava

ಬೆಂಗಳೂರು: ಕನ್ನಡಿಗರ ಅಚ್ಚು ಮೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯು ಬೆಳಕಿನ ಹಬ್ಬದ ಪ್ರಯುಕ್ತ ತನ್ನ ವೀಕ್ಷಕರಿಗೆ ನಗುವಿನ ರಸದೌತಣ ನೀಡಲು ಸಜ್ಜಾಗಿದೆ. ಪ್ರಸ್ತುತ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಎಲ್ಲಾ ಕಾರ್ಯಕ್ರಮಗಳು, ಧಾರಾವಾಹಿಗಳು ಪ್ರೇಕ್ಷಕರ ಮನಗೆದ್ದು ಮನೆಮಾತಾಗಿದೆ. ಹೀಗಾಗಿ ಮನೆ ಮಂದಿಯೆಲ್ಲಾ ಒಟ್ಟಾಗಿ ಆಚರಿಸುವ ದೀಪಾವಳಿಯ ಸುಸಂದರ್ಭದಲ್ಲಿ ಇನ್ನಷ್ಟು ಮನರಂಜನೆ ನೀಡುವ ಸಲುವಾಗಿ ನವೆಂಬರ್‌ 5ರಂದು ರಾತ್ರಿ ʼದೀಪಾವಳಿ ನಗೆ ಉತ್ಸವʼ (Deepawali Nage Utsavsa) ಕಾರ್ಯಕ್ರಮ ಪ್ರಸಾರ ಮಾಡುತ್ತಿದೆ.

ಹಬ್ಬದ ಸಂಭ್ರಮವಿರುವ ಈ ವೇದಿಕೆಯಲ್ಲಿ ಹಾಸ್ಯಕಲಾವಿದರಾದ ಮಿತ್ರ ಹಾದೂ ತಬಲಾ ನಾಣಿ ನಗೆ ಚಟಾಕಿಯ ಕಾಮಿಡಿ ಪಟಾಕಿಯನ್ನು ಸಿಡಿಸಿದ್ದಾರೆ. ಜತೆಗೆ ಕಾಮಿಡಿ ಗ್ಯಾಂಗ್ಸ್ ಖ್ಯಾತಿಯ ಸ್ಪರ್ಧಿಗಳು ಒಂದಷ್ಟು ಹಾಸ್ಯ ಸ್ಕಿಟ್ ಪ್ರದರ್ಶಿಸಿದ್ದು, ವೀಕ್ಷಕರು ನಕ್ಕು ಸುಸ್ತಾಗೋದಂತು ಖಚಿತ. ಇನ್ನು ವೀಕ್ಷಕರ ಅಚ್ಚುಮೆಚ್ಚಿನ ನಟಿ ಶುಭ ಪೂಂಜಾ ಅವರು ತರ್ಲೆ ತುಂಟಾಟದ ಜತೆ ಮಸ್ತ್ ಹೆಜ್ಜೆ ಹಾಕಿದ್ದಾರೆ.

ಅದೇ ರೀತಿ ಸ್ಟಾರ್ ಸುವರ್ಣದ ಮೋಸ್ಟ್ ಪಾಪ್ಯುಲರ್ ಜೋಡಿ ವಿಕ್ರಮ್ ಮತ್ತು ವೇದಾಳ ಡಾನ್ಸ್ ಪಡ್ಡೆ ಹುಡುಗರ ನಿದ್ದೆ ಕದಿಯೋದಂತೂ ಖಚಿತ. ಕನ್ನಡ ಕಿರುತೆರೆಯಲ್ಲಿ ಇದೇ ಮೊಟ್ಟಮೊದಲ ಬಾರಿಗೆ ನಟಿ ಚೈತ್ರಾ ಜೆ ಆಚಾರ್ ‘ದೀಪಾವಳಿ ನಗೆ ಉತ್ಸವ’ ವೇದಿಕೆಯಲ್ಲಿ ಅದ್ಭುತ ಡಾನ್ಸ್ ಪರ್ಫಾರ್ಮೆನ್ಸ್ ನೀಡಿದ್ದಾರೆ. ಜೊತೆಗೆ ಸತೀಶ್ ನೀನಾಸಂ, ಅದಿತಿ ಪ್ರಭುದೇವ್, ದಿವ್ಯ ಉರುಡುಗ, ಅರವಿಂದ್ ಕೆ.ಪಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ವೀಕ್ಷಕರಿಗೆ ಇನ್ನಷ್ಟು ಮನರಂಜನೆಯ ರಸದೌತಣ ನೀಡಿದ್ದಾರೆ.

ಇದನ್ನೂ ಓದಿ | Raja Marga Column : ಭೈರಪ್ಪರ ಪರ್ವ ಈಗ ಸಿನಿಮಾ; ಕನ್ನಡದ ಶ್ರೇಷ್ಠ ಕಾದಂಬರಿ ಸೀಮೋಲ್ಲಂಘನ

ಈ ದೀಪಾವಳಿ ಹಬ್ಬಕ್ಕೆ ಮಸ್ತಿಯ ರಸದೂಟವನ್ನು ಉಣಬಡಿಸಲು ಬರ್ತಿದೆ ‘ದೀಪಾವಳಿ ನಗೆ ಉತ್ಸವ’ ಇದೇ ಭಾನುವಾರ ರಾತ್ರಿ 7 ಗಂಟೆಗೆ ನಿಮ್ಮ ನೆಚ್ಚಿನ ಸ್ಟಾರ್ ಸುವರ್ಣ ವಾಹಿನಿಯಲ್ಲಿ ತಪ್ಪದೇ ವೀಕ್ಷಿಸಿ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version