ಚಾಮರಾಜನಗರ: ಬಾವಲಿ ಕುಳಿತು ಗಲೀಜು ಮಾಡುತ್ತವೆ, ವಸತಿ ಗೃಹದ ಕೊಠಡಿ ಮೇಲೆ ಮರದಿಂದ ಮಳೆ ನೀರು ಬಿದ್ದು ಕೊಠಡಿ ಹಾಳಾಗುತ್ತದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮರಗಳನ್ನು ಕಡಿದುಹಾಕಿದ್ದಾರೆ. ಗಿಡವನ್ನು ನೆಟ್ಟು ಬೆಳೆಸಬೇಕಾದವರೇ, ಮರ ಕಡಿದವರನ್ನು ಹಿಡಿದು ಶಿಕ್ಷೆಗೊಳಪಡಿಸಬೇಕಾದವರೇ ಇಂಥ ಒಂದು ಕ್ಷುಲ್ಲಕ ಕಾರಣಕ್ಕಾಗಿ ಹಸಿರಿನಿಂದ ಉಸಿರು ನೀಡುವ ಮರಗಳನ್ನು ಕಡಿದು ಅರಣ್ಯ ನಾಶಕ್ಕೆ (Deforestation) ಮುಂದಾಗಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಹನೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಈ ಪ್ರಕರಣ ನಡೆದಿದೆ. ಒಟ್ಟು ಆರು ಮರಗಳಿಗೆ ಕೊಡಲಿ ಏಟು ನೀಡಿದ್ದು, ಎಲ್ಲವನ್ನೂ ನೆಲಕ್ಕುರುಳಿಸಲಾಗಿದೆ. ಈ ಎಲ್ಲ ಮರಗಳು ಕಚೇರಿಯ ಪಕ್ಕದಲ್ಲೇ ಬೆಳೆದಿದ್ದವು.
ಮಹದೇಶ್ವರ ವನ್ಯಧಾಮದ ಹನೂರು ವನ್ಯಜೀವಿ ಉಪವಿಭಾಗದ ಕಚೇರಿಯ ಈ ಕೃತ್ಯಕ್ಕೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ಕೇಳಿಬಂದಿದೆ. ಬಾಗೆ, ಗುಲ್‌ಮೊಹರ್ ಸೇರಿದಂತೆ ಆರು ಮರಗಳನ್ನು ಕಡಿದುಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಅರಣ್ಯಾಧಿಕಾರಿಗಳು ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ.
ಇದನ್ನೂ ಓದಿ | Karnataka Election | ವರುಣ ಕ್ಷೇತ್ರವೇ ಗಟ್ಟಿ ಮಾಡಿಕೊಂಡರಾ ಸಿದ್ದರಾಮಯ್ಯ?; ಕುತೂಹಲ ಮೂಡಿಸಿದ ಮಾಜಿ ಸಿಎಂ ನಡೆ