Site icon Vistara News

Demand for bribe | ಹಣ ಕೊಟ್ಟರಷ್ಟೇ ಮುಂದಿನ ಕೆಲಸ; ವೈರಲ್‌ ಆಯ್ತು ಗುರುಮಠಕಲ್‌ ತಹಸೀಲ್ದಾರ್‌ ಆಡಿಯೊ!

Demand for bribe ಯಾದಗಿರಿ ತಹಸೀಲ್ದಾರ್

ಯಾದಗಿರಿ: ಇಲ್ಲಿನ ಗುರುಮಠಕಲ್ ತಹಸೀಲ್ದಾರ್‌ ಶರಣಬಸವ ಎಂಬುವವರ ವಿರುದ್ಧ ಹಣಕ್ಕಾಗಿ ಬೇಡಿಕೆ (Demand for bribe) ಇಟ್ಟಿರುವ ಆರೋಪವೊಂದು ಕೇಳಿ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಹಣ ಕೊಟ್ಟರೆ ಮಾತನಾಡಿ ಇಲ್ಲವೆಂದರೆ ಬೇಡ ಎಂಬ ಆಡಿಯೊ ವೈರಲ್‌ ಆಗಿದೆ. ವೈರಲ್‌ ಆಗಿರುವ ಆಡಿಯೊ ಜಿಲ್ಲೆಯ ಗುರುಮಠಕಲ್ ತಹಸೀಲ್ದಾರ್‌ ಶರಣಬಸವ ಅವರದ್ದು ಎಂದು ಹೇಳಲಾಗುತ್ತಿದೆ.

ಗುರುಮಠಕಲ್ ತಾಲೂಕಿನ ಗಾಜರಕೋಟ್‌ ಗ್ರಾಮದ 1131, 1132ರ ಸರ್ವೇ ನಂಬರ್‌ನ ಜಮೀನು ಸಂಬಂಧ ಹಳ್ಳಿ ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಜಮೀನಿನ ದಾಖಲೆ, ಸಿಂಧುತ್ವ ಸಂಬಂಧ ಲಕ್ಷಕ್ಕೂ ಅಧಿಕ ಹಣದ ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.

ತಹಸೀಲ್ದಾರ್‌ ಶರಣಬಸವ

ನನ್ನ ಏಳಿಗೆ ಸಹಿಸದವರ ಪಿತ್ತೂರಿ ಇದು- ತಹಸೀಲ್ದಾರ್‌ ಶರಣಬಸವ
ಜಿಲ್ಲೆಯಲ್ಲಿ ಲಂಚದ ಆಡಿಯೊ ವೈರಲ್‌ ಆಗುತ್ತಿದ್ದಂತೆ ಈ ಕುರಿತು ಶರಣಬಸವ ಅವರು ಪ್ರತಿಕ್ರಿಯಿಸಿದ್ದು, ನನ್ನ ಏಳಿಗೆ ಸಹಿಸದವರು ಈ ಪಿತೂರಿ ಮಾಡಿದ್ದಾರೆ. ಈಗ ವೈರಲ್‌ ಆಗಿರುವ ಆಡಿಯೊ ನನ್ನದಲ್ಲ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಈ ಹಿಂದೆ ಸರಿಯಾಗಿ ಕೆಲಸ ಮಾಡದ 3 ಜನ ಗ್ರೂಪ್‌ ಡಿ ನೌಕರರ ವಿರುದ್ಧ ನೋಟಿಸ್ ನೀಡಲಾಗಿತ್ತು. ಸಂಭಾಷಣೆಯು ಮಿಮಿಕ್ರಿ ಮಾಡಿ ವೈರಲ್ ಮಾಡಿರಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Voter data | ರಾಜಕೀಯ ನಾಯಕರ ಪರ ಖಾಸಗಿ ಸಮೀಕ್ಷೆ ಮಾಡ್ತಿತ್ತಾ ಚಿಲುಮೆ? ನಂದೀಶ್‌ ರೆಡ್ಡಿ 18 ಲಕ್ಷ ಕೊಟ್ಟಿದ್ಯಾಕೆ?

Exit mobile version