ವಿಜಯಪುರ: ಜಿಲ್ಲೆಯ ದೈಹಿಕ ಶಿಕ್ಷಕರ (Physical Education Teachers) ಬಡ್ತಿ ಪ್ರಕ್ರಿಯೆಗಳನ್ನು (Teachers Promotion) ತಕ್ಷಣ ಆರಂಭಿಸಬೇಕು ಎನ್ನುವುದೂ ಸೇರಿದಂತೆ ವಿವಿಧ ವಿಷಯಗಳ ಕುರಿತು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕ ವತಿಯಿಂದ ಡಿಡಿಪಿಐ ಎನ್.ಎಚ್. ನಾಗೂರ ಅವರನ್ನು ಭೇಟಿ ಮಾಡಿ, ಚರ್ಚಿಸಲಾಯಿತು.
ನಗರದ ಶಾಲಾ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಡಿಡಿಪಿಐ ಎನ್.ಎಚ್. ನಾಗೂರ ಅವರನ್ನು ಭೇಟಿ ಮಾಡಿ, ಚರ್ಚೆ ನಡೆಸಿದರು.
ಇದನ್ನೂ ಓದಿ: PSI Exam: ಪಿಎಸ್‌ಐ ಪರೀಕ್ಷೆ ಮುಂದೂಡಿಕೆ, ಜ. 23ಕ್ಕೆ ಫಿಕ್ಸ್: ಗೃಹ ಸಚಿವರ ಘೋಷಣೆ
ವಿಜಯಪುರ ಜಿಲ್ಲೆಯ ದೈಹಿಕ ಶಿಕ್ಷಕರ ಬಡ್ತಿ ಪ್ರಕ್ರಿಯೆಗಳನ್ನು ತಕ್ಷಣ ಆರಂಭಿಸಬೇಕು, ಪ್ರಾಥಮಿಕ ಶಾಲೆಯಿಂದ ಮುಖ್ಯ ಗುರುಗಳ ಹುದ್ದೆಗೆ ಬಡ್ತಿ ಕೊಡಲು ಪಟ್ಟಿ ಸಿದ್ದಪಡಿಸಬೇಕು, ಜಿಲ್ಲಾ ಗುರುಭವನ ಹಾಗೂ ಅದಕ್ಕೆ ಸಂಬಂಧಿಸಿದ ಇತರ ಸಿದ್ಧತೆಗಳನ್ನು ಹಾಗೂ ಅದರ ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಬೇಕು ಎಂದು ಕೋರಲಾಯಿತು.
ಇಂಡಿ ತಾಲೂಕು ಶೈಕ್ಷಣಿಕ ಸಮ್ಮೇಳನ ಜತೆಗೆ ರಾಜ್ಯ ಮಟ್ಟದ ಶೈಕ್ಷಣಿಕ ಕಾರ್ಯಗಾರವನ್ನು ವಿಜಯಪುರದಲ್ಲಿ ನಡೆಸುವ ಬಗ್ಗೆ ಸೇರಿದಂತೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಅಂಶಗಳು ಕುರಿತು ಚರ್ಚಿಸಲಾಯಿತು.
ಇದನ್ನೂ ಓದಿ: Karnataka Weather : ಮಿಚುಂಗ್ ಚಂಡಮಾರುತ ಎಫೆಕ್ಟ್; ನಾಳೆ ಭಾರಿ ಮಳೆ ಸಾಧ್ಯತೆ
ಈ ಸಂದರ್ಭದಲ್ಲಿ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಜಯಪುರ ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಹನುಮಂತ ಕೊನದಿ, ಅಲ್ಲಾಭಕ್ಷ ವಾಲಿಕಾರ ಹಾಗೂ ಶಿಕ್ಷಣ ಅಧಿಕಾರಿ ಅಶೋಕ ಲಿಮಕಾ ಸೇರಿದಂತೆ ಇತರರು ಉಪಸ್ಥಿತರಿದ್ದರು.