ಉಡುಪಿ: ಸಮಾಜದಲ್ಲಿ ಧಾರ್ಮಿಕ ಜಾಗೃತಿಗಾಗಿ (Dharma Jagruthi) ವಿಶ್ವ ಹಿಂದೂ ಪರಿಷತ್ ಆಯೋಜಿಸುತ್ತಿರುವ ಧರ್ಮ ಜಾಗೃತಿ ನಡಿಗೆ ಭಾನುವಾರ ಬ್ರಹ್ಮಾವರದಿಂದ ನೀಲಾವರದವರೆಗೆ ನಡೆಯಿತು.
ಬಜಂಗ ದಳ ಬ್ರಹ್ಮಾವರ ಪ್ರಖಂಡ ವತಿಯಿಂದ ಆಯೋಜಿಸಲಾಗಿದ್ದ ಧರ್ಮ ಜಾಗೃತಿ ನಡಿಗೆ ಬ್ರಹ್ಮಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಆರಂಭಗೊಂಡು ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಅಂತ್ಯಗೊಂಡಿತು.
ನಡಿಗೆಯ ಮೂಲಕ ಧರ್ಮ ಸಂದೇಶ ಸಾರುವ ಕಾರ್ಯ ಇದಾಗಿದ್ದು, ಉಡುಪಿ ಶಾಸಕ ಕೆ. ರಘುಪತಿ ಭಟ್ ಅವರು ಭಾಗವಹಿಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸಿದರು. ಉಡುಪಿ ಜಿಲ್ಲೆಯ ನಾನಾ ಭಾಗಗಳಲ್ಲಿ ಧರ್ಮ ಜಾಗೃತಿ ನಡಿಗೆ ನಡೆಯುತ್ತಿದೆ.
ಇದನ್ನೂ ಓದಿ | ಧರ್ಮ ದಂಗಲ್ | ಮುಸ್ಲಿಂ ವ್ಯಕ್ತಿಯಿಂದ ಹಿಂದು ಹೆಸರಲ್ಲಿ ಅಂಗಡಿ ಆರೋಪ; ಹಿಂದು ಸಂಘಟನೆಗಳ ಆಕ್ರೋಶ, ಪೊಲೀಸ್ ದೂರು