Site icon Vistara News

Dharwad university : ಗಗನಯಾನಕ್ಕೆ ಸಿದ್ಧವಾಗಿವೆ ಧಾರವಾಡ ಕೃಷಿ ವಿವಿಯ ನೊಣಗಳು!

Dharwad Agricultural Universitys fly kit to go for study on Gaganyaan spacecraft

ಧಾರವಾಡ: ಗಗನಯಾನಕ್ಕೆ ಧಾರವಾಡದ ಕೃಷಿ ವಿವಿಯ (Dharwad university) ನೊಣಗಳು ಸಿದ್ಧವಾಗಿವೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ನೊಣದ ಕಿಟ್ ಗಗನಯಾನ ನೌಕೆಯಲ್ಲಿ ಅಧ್ಯಯನಕ್ಕೆ ಹೋಗಲಿದ್ದು, ಹೊಸ ಅಧ್ಯಯನಕ್ಕೆ ಮುನ್ನುಡಿ ಬರೆಯಲು ಧಾರವಾಡ ಕೃಷಿ ವಿವಿ ಸಿದ್ಧವಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಜೈವಿಕಶಾಸ್ತ್ರ ವಿಭಾಗದಿಂದ ನೊಣದ ಕಿಟ್ ತಯಾರಿಯಾಗಿದೆ. ವಿವಿಯ ವಿಜ್ಞಾನಿ ರವಿಕುಮಾರ್ ಹೊಸಮನಿರಿಂದ ವಿಶೇಷ ಪ್ರಯೋಗ ನಡೆಯಲಿದೆ.. ದೇಶದ 75 ಕೃಷಿ ವಿವಿಗಳ ಪೈಕಿ ಧಾರವಾಡ ಕೃವಿ ವಿವಿ ಆಯ್ಕೆಯಾಗಿದೆ. 2025ರಲ್ಲಿ ಇಸ್ರೋದಿಂದ ನಭಾಕ್ಕೆ ಗಗನಯಾನ ನೌಕೆ ಹೋಗಲಿದ್ದು, ನೌಕೆಯಲ್ಲಿ 15 ಹಣ್ಣಿನ ನೊಣಗಳಿರುವ ಕಿಟ್ ತೆರಳಲಿದೆ.

ಇದನ್ನೂ ಓದಿ: SSLC Exam 3 Result 2024: ಎಸ್‌ಎಸ್‌ಎಲ್‌ಸಿ ಪರೀಕ್ಷೆ 3ರ ಫಲಿತಾಂಶ ಪ್ರಕಟ; ಮರುಎಣಿಕೆ, ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಆನ್‌ಲೈನ್‌ನಲ್ಲಷ್ಟೆ ಅವಕಾಶ

ಹಣ್ಣಿನ ನೊಣಕ್ಕೂ ಮನುಷ್ಯನ ದೇಹರಚನೆಗೂ ಹೋಲಿಕೆ ಹಿನ್ನೆಲೆಯಲ್ಲಿ ಬಾಹ್ಯಾಕಾಶದಲ್ಲಿ ನೊಣಗಳಲ್ಲಿ ಆಗುವ ಬದಲಾವಣೆ ಬಗ್ಗೆ ಅಧ್ಯಯನ ನಡೆಯಲಿದೆ. ಗಗನ ಯಾತ್ರಿಗಳು ಬಾಹ್ಯಾಕಾಶದಲ್ಲಿ ಇರುವಾಗ ಬಹಳಷ್ಟು ಮಂದಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಕಾಣಿಸಿಕೊಂಡಿದೆ. ಹೀಗಾಗಿ ಇದನ್ನು ಬಗೆಹರಿಸಲು ಬಾಹ್ಯಾಕಾಶದಲ್ಲಿ ನೊಣಗಳ ಅಧ್ಯಯನ ನಡೆಸಲಿದ್ದಾರೆ. ಈ ಫಲಿತಾಂಶ ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಸಹಕಾರ ನೀಡಲಿದೆ. ಅನ್ಯಗ್ರಹವಾಸದ ವೇಳೆ ಆಹಾರ ಪೂರೈಕೆ, ಸಂರಕ್ಷಣೆಗೆ ನೆರವು ನೀಡಲಾಗುತ್ತದೆ.

ಬಾಹ್ಯಾಕಾಶದ ಶೂನ್ಯ ಗುರುತ್ತದಲ್ಲಿ 7 ದಿನ ಗಗನ ನೌಕೆ ಸುತ್ತಾಟ ಇರಲಿದ್ದು, ಯಾನದಲ್ಲಿ ನೊಣಗಳಿಂದ ಕಿಟ್‌ನಲ್ಲೇ ಸಂತಾನೋತ್ಪತ್ತಿ ಮಾಡಲಿದೆ. ಕೃಷಿ ವಿವಿಯ ವಿಜ್ಞಾನಿಗಳು ಇಸ್ರೋದೊಂದಿಗೆ ಕೈ ಜೋಡಿಸಿದ್ದಾರೆ. ಇನ್ನೂ ಇದೆ ಮೊದಲ ಬಾರಿಗೆ ಗಗನಯಾನ ಅಧ್ಯಯನಕ್ಕೆ ಕೃಷಿ ವಿಜ್ಞಾನಿಗಳ ಬಳಕೆ ಮಾಡಲಾಗುತ್ತಿದೆ. ಇದು ಕೃಷಿ ವಿವಿಯ ವಿಜ್ಞಾನಿಗಳ ಹಿರಿಮೆ‌ ಹೆಚ್ಚಿಸಿದೆ. ಒಂದು ವೇಳೆ ಈ ಸಂಶೋಧನೆ ಯಶಸ್ವಿಯಾದರೆ ಮತ್ತೂಂದು ಮೈಲಿಗಲ್ಲು ಸ್ಥಾಪನೆ ಮಾಡಿದಂತೆ ಆಗುತ್ತದೆ. ಇಡೀ ವಿಶ್ವದಲ್ಲಿ ಯಾರೂ ಮಾಡಿರದ ಸಾಧನೆ ಮಾಡಲು ಕೃಷಿ ವಿವಿ ಹೊರಟಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version