Site icon Vistara News

Pathaan Controversy | ಹಿಂದುಗಳ ನಂಬಿಕೆಗಳನ್ನು ಬಾಲಿವುಡ್‌ ಹಾಳು ಮಾಡುತ್ತಿದೆ: ಪ್ರಮೋದ್‌ ಮುತಾಲಿಕ್‌

Belagavi Shootout

ಧಾರವಾಡ: ಬಾಲಿವುಡ್‌ನ ಪಠಾಣ್ ಸಿನಿಮಾದ ʼಬೇಷರಮ್‌ ರಂಗ್‌ʼ ಹಾಡು ಅಶ್ಲೀಲ ಮತ್ತು ಅಸಭ್ಯವಾಗಿದೆ. ನಟಿಗೆ ಕೇಸರಿ ಬಣ್ಣದ ಬಟ್ಟೆ ಹಾಕಿಸಿ ನಾಚಿಕೆಗೇಡಿನ ಬಣ್ಣ ಎಂದು ಸಿನಿಮಾ (Pathaan Controversy) ಹಾಡನ್ನು ಚಿತ್ರೀಕರಿಸಲಾಗಿದೆ. ಈ ಮೂಲಕ ವ್ಯವಸ್ಥಿತವಾಗಿ ಹಿಂದುಗಳನ್ನು ಟಾರ್ಗೆಟ್ ಮಾಡಿ, ನಮ್ಮ ನಂಬಿಕೆಗಳನ್ನು ಕೆಡಿಸುವ ಕಾರ್ಯ ನಡೆಯುತ್ತಿದೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌ ಕಿಡಿ ಕಾಡಿದ್ದಾರೆ.

ನಗರದಲ್ಲಿ ಗುರುವಾರ ಮಾತನಾಡಿದ ಅವರು, ದೇಶದಲ್ಲಿ ಈಗಾಗಲೇ ಪಠಾಣ್ ಸಿನಿಮಾಗೆ ಬಾಯ್ಕಾಟ್ ಅಭಿಯಾನ ಆರಂಭವಾಗಿದೆ. ಶ್ರೀರಾಮ ಸೇನೆ ವತಿಯಿಂದಲೂ ಬಾಯ್ಕಾಟ್ ಮಾಡಲಾಗುತ್ತದೆ. ಮುಂಬೈನ ಹಿಂದಿ ಚಲನಚಿತ್ರ ರಂಗ ದಾವೂದ್ ಇಬ್ರಾಹಿಂ, ಇಸ್ಲಾಂ ಮೂಲಭೂತವಾದಿಗಳು, ಕಮ್ಯುನಿಸ್ಟರು ಹಾಗೂ ನಾಸ್ತಿಕರ ಹಿಡಿತದಲ್ಲಿದೆ. ಇವರು ಸಿನಿಮಾಗಳ ಮೂಲಕ ಹಿಂದುಗಳ ನಂಬಿಕೆಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Shahrukh Khan | ಶುರುವಾಯ್ತು ಬಾಯ್ಕಾಟ್‌ ಅಭಿಯಾನ: ʻಪಠಾಣ್‌ʼ ಸಿನಿಮಾ ವಿರುದ್ಧ ನೆಟ್ಟಿಗರ ಆಕ್ರೋಶ, ಏನಿದು ವಿವಾದ?

ಇಂತಹ ಚಲನಚಿತ್ರಗಳಿಂದ ಲಿವಿಂಗ್ ಟುಗೆದರ್, ಲವ್ ಜಿಹಾದ್, ಅತ್ಯಾಚಾರ, ಅಪಹರಣಗಳು ಹೆಚ್ಚಾಗುತ್ತಿವೆ. ಅಶ್ಲೀಲ ಅಂಶಗಳ ಜತೆಗೆ ಹಿಂದು ದೇವರು, ಗ್ರಂಥಗಳನ್ನು ಅವಹೇಳನ ಮಾಡುವುದು ನಡೆಯುತ್ತಿದೆ. ಪಿಕೆ ಸಿನಿಮಾದಲ್ಲೂ ನಮ್ಮ ದೇವರಗಳನ್ನು ಅವಹೇಳನ ಮಾಡಲಾಗಿತ್ತು. ಸಿನಿಮಾಗಳಲ್ಲಿ ಪಾಕಿಸ್ತಾನದ ಹುಡುಗ ಹಾಗೂ ಹಿಂದು ಹುಡುಗಿ ನಡುವಿನ ಪ್ರೇಮಕತೆ, ಹಿಂದುಗಳನ್ನೇ ಗೂಂಡಾಗಳಾಗಿ ತೋರಿಸುವುದು ನಡೆಯುತ್ತಿದೆ. ಇಂತಹ ವಿವಾದಿತ ಅಂಶಗಳನ್ನು ಚಲನಚಿತ್ರ ಪ್ರಮಾಣೀಕರಣ ಮಂಡಳಿ ಗಮನಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮುಸ್ಲಿಮರು ಬುರ್ಕಾ ಹಾಕಿಕೊಂಡು ಕುಣಿಯಲಿ ಅಥವಾ ಕ್ರಿಶ್ಚಿಯನ್ನರು ಚರ್ಚ್ ಒಳಗೆ ಡ್ಯಾನ್ಸ್ ಮಾಡಲಿ ನೋಡೋಣ. ಇಂತಹವುಗಳ ಬಗ್ಗೆ ನಟ ಪ್ರಕಾಶ್ ರಾಜ್ ಆಗಲಿ ಇನ್ಯಾರೋ ಆಗಲಿ ಮಾತಾನಾಡಲ್ಲ. ನಾವು ತಾಳ್ಮೆಯಿಂದ ಇದ್ದೇವೆ ಎಂದು ಹಿಂದುಗಳನ್ನು ಕೆಣಕುತ್ತಿದ್ದಾರೆ ಎಂದ ಅವರು, ಅವಹೇಳನಕಾರಿ ಪಠಾಣ್‌ ಹಾಡು ವಾಪಸ್‌ ಪಡೆಯಬೇಕು ಇಲ್ಲದಿದ್ದರೆ ಸಿನಿಮಾ ಬಾಯ್ಕಾಟ್‌ ಅಭಿಯಾನ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ | Deepika Padukone | ಪಠಾಣ್‌ ಕೇಸರಿ ವಿವಾದ : ಅಕ್ಷಯ್‌ ಕುಮಾರ್‌ಗೆ ಬೇರೆ ರೂಲ್ಸ್‌? ಏನಿದು ವಾದ?

Exit mobile version