Site icon Vistara News

Dhruva Sarja | ದರ್ಶನ್‌ ಮನೆಗೆ ಅಚ್ಚರಿಯ ಭೇಟಿ ಕೊಟ್ಟ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ; ಅಭಿಮಾನಿ ಫುಲ್‌ ಖುಷ್‌

Dhruva Sarja

ಬಾಗಲಕೋಟೆ: ಇಲ್ಲಿನ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮಕ್ಕೆ ಚಿತ್ರನಟ ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ (Dhruva Sarja) ಭೇಟಿ ನೀಡಿದ್ದು, ಎಲ್ಲರಿಗೂ ಅಚ್ಚರಿ ಮೂಡಿಸಿತ್ತು.

ಗ್ರಾಮದ ದರ್ಶನ್‌ ಮಾದರ ಎನ್ನುವ ಯುವಕ ಧ್ರುವ ಸರ್ಜಾ ಅವರ ಕಟ್ಟಾ ಅಭಿಮಾನಿ.‌ ಸೋಮವಾರ ರಾತ್ರಿ ಸರ್ಜಾ ಅವರು ತಮ್ಮ ಅಭಿಮಾನಿ ದರ್ಶನ್ ಮನೆಗೆ ಸರ್ಪೈಸ್‌ ಭೇಟಿ ನೀಡಿದ್ದರು. ಇದು ಅಭಿಮಾನಿಯ ಆನಂದಕ್ಕೆ ಪಾರವೇ ಇರಲಿಲ್ಲ.

ದರ್ಶನ್ ಅವರ ಕುಟುಂಬ ಸದಸ್ಯರನ್ನು ಭೇಟಿ ಮಾಡಿ ಅವರೊಂದಿಗೆ ಸೆಲ್ಫಿ ತೆಗೆಸಿಕೊಂಡು, ಎಲ್ಲರೊಂದಿಗೆ ಕೆಲ ಸಮಯ ಕಳೆದು ಅಲ್ಲಿಂದ ನಿರ್ಗಮಿಸಿದ್ದಾರೆ. ಚಿತ್ರನಟ ಧ್ರುವಾ ಸರ್ಜಾ ಆ ಪುಟ್ಟ ಗ್ರಾಮಕ್ಕೆ ಬಂದಿದ್ದಾರೆಂದು ಸುದ್ದಿ ತಿಳಿದು ಗ್ರಾಮದ ಯುವಕರೆಲ್ಲರೂ ಧಾವಿಸಿದ್ದಾರೆ. ಯುವಕರೆಲ್ಲರೂ ಸರ್ಜಾ ಜತೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ಧ್ರುವ ಅವರ ದೊಡ್ಡ ಅಭಿಮಾನಿಯಾಗಿರುವ ದರ್ಶನ್ ಮಾದರ, ಇಳಕಲ್ ನಗರದಲ್ಲಿ ಧ್ರುವ ಸರ್ಜಾ ಹೆಸರಿನಲ್ಲಿ ಜಿಮ್ ಆರಂಭಿಸಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಯಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ಆಗಮಿಸಿದ್ದರು. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಹಿರೇಕೊಡಗಲಿ ಗ್ರಾಮವು ಕುಷ್ಟಗಿಗೆ ಸಮೀಪದಲ್ಲಿ ಇದ್ದ ಕಾರಣ ಅವರೇ ವಿಚಾರಿಸಿಕೊಂಡು ತಮ್ಮ‌ ನೆಚ್ಚಿನ ಅಭಿಮಾನಿ ಮನೆಗೆ ಭೇಟಿ ನೀಡಿ ಹೋಗಿದ್ದಾರೆ.

ಇದನ್ನೂ ಓದಿ | Priyanka Chopra| ಅಮೆರಿಕಾದಲ್ಲಿ ಪಿಗ್ಗಿ ಹೊಸ ಬ್ಯುಸಿನೆಸ್‌: ಭಾರತೀಯ ಸಂಪ್ರದಾಯಕ್ಕೆ ಒತ್ತು, ಆದರೆ ದುಬಾರಿ!

Exit mobile version