Site icon Vistara News

Oil well | ಕುಡಿಯುವ ನೀರಿನ ಬಾವಿಗಳಿಂದ ಬರುತ್ತಿದೆ ಡೀಸೆಲ್‌ ವಾಸನೆ, ಸಮೀಪದ ಪಂಪ್‌ನಿಂದ ಲೀಕಾಯ್ತಾ?

Oil well

ಕಾರವಾರ: ಅಂಕೋಲಾ ತಾಲೂಕಿನ ಮಠಾಕೇರಿ ಕ್ರಾಸ್ ಬಳಿಯ ಬಾವಿಯ (Oil well) ನೀರು ಡೀಸೆಲ್‌ ವಾಸನೆ ಬರುತ್ತಿದೆ. ಇದೇನು ಭೂಮಿಯಿಂದ ಡೀಸೆಲ್‌ ಒರತೆ ಬಂತಾ ಅಥವಾ ಬೇರೇನಾದರೂ ಆಗಿದೆಯಾ ಎಂದು ಪರಿಶೀಲಿಸಿ ಎಂದು ಬಾವಿಯ ಮಾಲಕರು ಪುರಸಭೆಗೆ ದೂರು ನೀಡಿದ್ದಾರೆ.

ಮಠಾಕೇರಿಯ ಗಣಪತಿ ವೆಂಕಟರಮಣ ಕಿಣಿ ಮತ್ತು ಸಂತೋಷ್ ಗಣೇಶ್ ನಾಯ್ಕ ರವರ ಮಾಲೀಕತ್ವದ ಎರಡು ಬಾವಿಗಳಲ್ಲಿ ಕುಡಿಯುವ ಶುದ್ಧ ನೀರು ದೊರೆಯುತ್ತಿತ್ತು. ಆದರೆ ಕಳೆದ 3 ದಿನಗಳಿಂದ ಬಾವಿಯ ನೀರು ಡೀಸೆಲ್  ವಾಸನೆ ಬರಲಾರಂಭಿಸಿದೆ. ಅಲ್ಲದೆ ನೀರನ್ನು ಸಹ ಕುಡಿಯಲಾಗುತ್ತಿಲ್ಲ. ಹೀಗಾಗಿ ಬಾವಿಯ ಮಾಲಕರು ಪುರಸಭೆಗೆ ದೂರು ದಾಖಲಿಸಿದ್ದಾರೆ.

ಅಂಕೋಲಾದಲ್ಲಿ ಕಳೆದ ವರ್ಷವೂ ಪಟ್ಟಣದ ಒಂದು ಪೆಟ್ರೋಲ್ ಪಂಪ್‌ನಿಂದ ಡೀಸೆಲ್ ಸೋರಿಕೆಯಾಗಿ ಬಾವಿಯ ನೀರನ್ನು ಕುಡಿಯಲಾರದಂತಾಗಿತ್ತು. ಈಗ ಮತ್ತೆ ಮಠಾಕೇರಿ ಬಾವಿಯಲ್ಲಿ ಇದೇ ಸಮಸ್ಯೆ ಎದುರಾಗಿದೆ. ಸಮೀಪದ ಡೀಸೆಲ್ ಪಂಪ್ ನಿಂದ ಈ ಡಿಸೆಲ್ ಬಂದಿರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಎನ್ ಎಮ್ ಮೆಸ್ತಾ, ಆಹಾರ ನೀರಿಕ್ಷಕ ನವೀನ ನಾಯ್ಕ, ಪುರಸಭಾ ನೀರು ಸರಬರಾಜು ಅಧಿಕಾರಿ ಆನಂದು ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಬಾವಿಯನ್ನು ಪರೀಕ್ಷಿಸಿದ್ದಾರೆ. ನೀರಿನ್ನು ಪರೀಕ್ಷೆಗಾಗಿ ಸಂಬಂಧಿಸಿದ ಇಲಾಖೆಗೆ  ಕಳುಹಿಸಿದ್ದಾರೆ. ಎಲ್ಲಿಂದ ಈ ಡೀಸೆಲ್ ಬರುತ್ತಿದೆ ಎನ್ನುವುದನ್ನು ಪರಿಶೀಲನೆ ನಡೆಸಿ  ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.

ಇದನ್ನೂ ಓದಿ | ಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲ್‌, ಡೀಸೆಲ್‌ ತರಲು ಸಿದ್ಧ, ಕೇಂದ್ರ ಮಹತ್ವದ ಘೋಷಣೆ

Exit mobile version