Site icon Vistara News

CM Basavaraj Bommai | ಇಂದು ಸಿಎಂ ಹಾವೇರಿ ಜಿಲ್ಲಾ ಪ್ರವಾಸ, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

Basavaraj Bommai

Basavaraj Bommai

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಭಾನುವಾರ ತಮ್ಮ ತವರು ಜಿಲ್ಲೆ ಹಾವೇರಿ ಪ್ರವಾಸ ಕೈಗೊಳ್ಳಲಿದ್ದಾರೆ. ಅವರು ನಿಜಶರಣ ಅಂಬಿಗರ ಚೌಡಯ್ಯ ಶರಣ ಸಂಸ್ಕೃತಿ ಉತ್ಸವದಲ್ಲಿ ಭಾಗಿಯಾಗಲಿದ್ದಾರೆ.

ರಾಣೇಬೆನ್ನೂರು ತಾಲ್ಲೂಕಿನ ನರಸೀಪುರಲ್ಲಿ ಕಾರ್ಯಕ್ರಮ ನಡೆಯಲಿದೆ. ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಯೋಗಥಾನ್ ಕಾರ್ಯಕ್ರಮ
ಮತ್ತೊಂದೆಡೆ, ಹಾವೇರಿಯಲ್ಲಿ ಬೃಹತ್ ಯೋಗಾಥಾನ್ ಗಿನ್ನಿಸ್ ವಿಶ್ವದಾಖಲೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಾವೇರಿಯ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಯೋಗಥಾನ್ ಬೆಳಗ್ಗೆ 8.30 ರವರೆಗೆ ನಡೆಯಲಿದೆ. ಸುಮಾರು 10 ಸಾವಿರ ಜನ ಭಾಗಿಯಾಗಲಿದ್ದು, ಯೋಗ ಪ್ರದರ್ಶನವು ನಡೆಯಲಿದೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲಿಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಪತಂಜಲಿ ಯೋಗ ಒಕ್ಕೂಟದ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಕ್ರೀಡಾಂಗಣದ ಒಳ ಭಾಗದಲ್ಲಿ 6500 ಶಾಲಾ ಕಾಲೇಜು ವಿದ್ಯಾರ್ಥಿಗಳು, ಹೊರ ಭಾಗದಲ್ಲಿ 3500 ಸಂಘ ಸಂಸ್ಥೆ, ಸರಕಾರಿ ನೌಕರರು ಹಾಗೂ ಸಾರ್ವಜನಿಕರಿಗೆ ಅವಕಾಶವಿದೆ.

ಇದನ್ನೂ ಓದಿ | ವಿಚಿತ್ರ ಕಾಯಿಲೆ | ಹಾವೇರಿಯಲ್ಲಿ ಚರ್ಮಗಂಟು ರೋಗಕ್ಕೆ ಬಲಿಯಾಗುತ್ತಿವೆ ಜಾನುವಾರುಗಳು!

Exit mobile version