Site icon Vistara News

Modi Road Show | ಎಂಟಾದರೂ ಮಾಡ್ಲಿ, ಹತ್ತಾದರೂ ಮಾಡ್ಲಿ: ಮೋದಿ ರೋಡ್‌ ಶೋ ಬಗ್ಗೆ ಡಿ.ಕೆ. ಶಿವಕುಮಾರ್‌ ವ್ಯಂಗ್ಯ

dk shivakumar

ಬೆಂಗಳೂರು: ನರೇಂದ್ರ ಮೋದಿ ಅವರು ಎಂಟು ಕಿಲೋ ಮೀಟರಾದ್ರೂ ರೋಡ್‌ ಶೋ ಮಾಡ್ಲಿ, ೧೦ ಕಿ.ಮೀ. ಆದ್ರೂ ರೋಡ್‌ ಶೋ ಮಾಡ್ಲಿ, ಅವರ ಚುನಾವಣಾ ಪ್ರಚಾರ ಅವರು ಮಾಡ್ಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ವ್ಯಂಗ್ಯವಾಡಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಮೋದಿ ರೋಡ್‌ ಶೋ ದೊಡ್ಡ ಸಂಗತಿಯಲ್ಲ ಎಂದರು. ನಾನು 500 ಕಿಮೀ ನಡೆದುಕೊಂಡು ಹೋಗಿದ್ದೇನೆ. ಮೇಕೆದಾಟು ಯೋಜನೆಗಾಗಿ 150 ಕಿಮೀ ನಡೆದಿದ್ದೇವೆ. ಅವರೊಂದು ಉದ್ದೇಶಕ್ಕೆ ನಡೆದಿದ್ದಾರೆ‌. ನಾವೊಂದು ಒಂದು ಉದ್ದೇಶಕ್ಕೆ ನಡೆದಿದ್ದೇವೆ ಎಂದರು.

ʻʻಇಷ್ಟೆಲ್ಲ ಶೋ ಮಾಡುವ ಮೋದಿ ಅವರು ಮಹದಾಯಿ ವಿಚಾರಕ್ಕೆ ಮೊದಲು ಉತ್ತರ ಕೊಡಲಿ. ಅವರದ್ದು ಬರೀ ಡಬಲ್ ಎಂಜಿಜಿನ್ ಸರ್ಕಾರ ಅಲ್ಲ, ಮಹದಾಯಿ ವಿಚಾರದಲ್ಲಿ ನಾಲ್ಕು ಎಂಜಿನ್‌ನ ಸರ್ಕಾರವಿದೆʼʼ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ಅವರು ಮಹಾದಾಯಿ ವಿಚಾರದ ಬಗ್ಗೆ ಮಾತನಾಡಿದರೆ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿರುವ 40% ಕಮಿಷನ್ ಆರೋಪಕ್ಕೆ ಉತ್ತರ ಕೊಟ್ಟರೆ ಅವರಿಗೆ ಒಂದು ದೊಡ್ಡ ನಮಸ್ಕಾರ, ಕೋಟಿ ನಮಸ್ಕಾರ ಎಂದು ಹೇಳಿದರು ಡಿ.ಕೆ. ಶಿವಕುಮಾರ್‌.

ವಿದ್ಯುತ್‌ ಕೊಡುಗೆ ಗಿಮಿಕ್‌ ಅಲ್ಲ
ಕಾಂಗ್ರೆಸ್‌ನವರು ಹತಾಶರಾಗಿದ್ದಾರೆ. 200 ಯುನಿಟ್ ಉಚಿತ ವಿದ್ಯುತ್‌ ನೀಡಲು ಮುಂದಾಗಿರುವುದು ಹತಾಶೆಯ ಪ್ರತೀಕ ಎಂಬ ಸಿಎಂ ಬೊಮ್ಮಾಯಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ʻʻನಾನು ಪವರ್ ಮಿನಿಸ್ಟರ್ ಆಗಿದ್ದವನು. ನಾನು ಸಹ ದಾಖಲೆ ಕೊಡುತ್ತೇನೆ. ಹಿಂದೆ ರಾಜ್ಯದಲ್ಲಿ ವಿದ್ಯುತ್ ಕೊರತೆಯಿಂದ ಪವರ್ ಕಟ್ ಆಗುತ್ತಿತ್ತು. ನಾನು ಪವರ್ ಮಿನಿಸ್ಟರ್ ಆದ ಮೇಲೆ ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಆಗುತ್ತಿದೆ. ಈಗ ಹೊರರಾಜ್ಯಗಳಿಗೆ ವಿದ್ಯುತ್‌ ಮಾರಾಟ ಮಾಡಲಾಗುತ್ತಿದೆ. ಹೀಗಾಗಿ ಉಚಿತ ವಿದ್ಯುತ್‌ ನೀಡುವುದು ಕಷ್ಟವಲ್ಲ. ಇದರಿಂದ ಜನರಿಗೆ ಲಾಭವಾಗುತ್ತದೆ” ಎಂದರು.

ಇದನ್ನೂ ಓದಿ | National Youth Festival | ಡಿಜಿಟಲ್‌ ಪೇಮೆಂಟ್‌ ಅಸಾಧ್ಯ ಎಂದರು; ಈಗ ನಾವೇ ನಂ.1: ಎದುರಾಳಿಗಳಿಗೆ ಮೋದಿ ತಿರುಗೇಟು

Exit mobile version