ಯಾದಗಿರಿ: ಗ್ರಾಮೀಣ (Rural) ಭಾಗದ ಜನರು ಸಾಕಷ್ಟು ನಿರೀಕ್ಷೆಯಿಟ್ಟುಕೊಂಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ (Election) ನಿಮ್ಮನ್ನು ಗೆಲ್ಲಿಸಿದ್ದು, ಅವರ ನಿರೀಕ್ಷೆಯಂತೆ ಹಳ್ಳಿಗಳಲ್ಲಿ ಅಭಿವೃದ್ಧಿ (Villages Development) ಕಾರ್ಯ ಮಾಡಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ತಾಲೂಕಿನ ಠಾಣಾಗುಂದಿ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ, ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಅನ್ನಪೂರ್ಣ ಕಟಕಟಿ ಅವರನ್ನು ಯಾದಗಿರಿಯ ಲಕ್ಷ್ಮಿನಗರದ ಶಾಸಕರ ನಿವಾಸದಲ್ಲಿ ಸನ್ಮಾನಿಸಿ, ಬಳಿಕ ಅವರು ಮಾತನಾಡಿದರು.
ಇದನ್ನೂ ಓದಿ: Koppala News: ಗಂಗಾವತಿಯಲ್ಲಿ ಜಯಲಕ್ಷ್ಮಿ, ಶ್ರೀರಂಗನಾಥ ಸ್ವಾಮಿ ದೇಗುಲಗಳ ಹುಂಡಿ ಎಣಿಕೆ; 3.92 ಲಕ್ಷ ರೂ. ಸಂಗ್ರಹ
ಯಾದಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಹೆಚ್ಚಿನ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳಾಗಿ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿಯಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ನುಡಿದಂತೆ ನಡೆದುಕೊಳ್ಳುತ್ತಿದೆ, ಐದು ಗ್ಯಾರಂಟಿ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ, ಸರ್ಕಾರದ ಅಭಿವೃದ್ಧಿ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: Weather Report : ವಾರಾಂತ್ಯದಲ್ಲಿ ಇಲ್ಲೆಲ್ಲ ವ್ಯಾಪಕ ಮಳೆ; ನಿಮ್ಮ ಊರು ಇದೆಯಾ ನೋಡಿ
ಈ ಸಂದರ್ಭದಲ್ಲಿ ಮುಖಂಡರಾದ ಶಾಂತಮ್ಮ ಶಿವಶರಣಪ್ಪ, ಪಾರ್ವತಿ ರಾಜಪ್ಪ, ಸಿದ್ದು ಸಾಹುಕಾರ, ಮೈಬೂಸಾಬ್, ಚಂದ್ರಮ್ಮ, ಮಹಾದೇವಮ್ಮ,ಸುನೀತಾ , ಹೈಯಣ್ಣ ನಾಯಕ, ಬಸವರಾಜಪ್ಪ ಗೌಡ, ಭೀಮರಾಯ ಠಾಣಾಗುಂದಿ, ಭೀಮುನಾಯಕ, ಬಸವರಾಜ ಅಣಬಿ, ಶರಣಗೌಡ ಮಾಲಿಪಾಟೀಲ, ಶರಣಪ್ಪ ದಳಪತಿ, ರಾಜಪ್ಪ ದೊಡ್ಡಮನಿ,ರಾಜಪ್ಪ ಠಾಣಾಗುಂದಿ, ವಿಶ್ವರಾಜ ಕೆಂಭಾವಿ,ಕಾಶಿನಾಥ ತಳಕ ಸೇರಿದಂತೆ ಅನೇಕರು ಇದ್ದರು.