Site icon Vistara News

Dog Attack | ಸಾಕು ನಾಯಿ ದಾಳಿ; ಬಾಲಕನಿಗೆ ಗಂಭೀರ ಗಾಯ

pitbull dog attack in hubli

ಹುಬ್ಬಳ್ಳಿ: ಟ್ಯೂಷನ್‌ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕನೊಬ್ಬನ ಮೇಲೆ ಸಾಕು ನಾಯಿಯೊಂದು ದಾಳಿ (Dog Attack) ಮಾಡಿದ್ದು, ಭೀಕರವಾಗಿ ಗಾಯಗೊಳಿಸಿದೆ. ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿ‌ಯ ಪಾಟೀಲ್ ಗಲ್ಲಿಯಲ್ಲಿ ಘಟನೆ ನಡೆದಿದ್ದು, ಪಿಟ್‌ಬುಲ್ ಜಾತಿಯ ಶ್ವಾನದ ದಾಳಿಗೆ ಸಿಲುಕಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಪವನ ದೊಡಮನಿ ಎಂಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು, ಕಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಗುರುಸಿದ್ದಪ್ಪ‌ ಚನ್ನೋಜಿ ಎಂಬುವವರಿಗೆ ಸೇರಿದ ಪಿಟ್ ಬುಲ್ ಜಾತಿಯ ಶ್ವಾನ ಇದಾಗಿದ್ದು, ತೀವ್ರವಾಗಿ ದಾಳಿ ನಡೆಸಿದೆ. ಬಾಲಕ ಟ್ಯೂಷನ್‌ ಮುಗಿಸಿ ಬರುತ್ತಿದ್ದ ವೇಳೆ ನಾಯಿಯು ಏಕಾಏಕಿ ದಾಳಿ ನಡೆಸಿದೆ ಎನ್ನಲಾಗಿದೆ. ಬೇಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ‌ ನಡೆದಿದೆ.

ಇದನ್ನೂ ಓದಿ | Karnataka election | ಸಿದ್ದರಾಮಯ್ಯ – ಡಿಕೆಶಿ ಜೋಡೆತ್ತುಗಳಲ್ಲ, ಕಿತ್ತಾಡುವ ಚಿರತೆಗಳು ಎಂದ ಶ್ರೀರಾಮುಲು

Exit mobile version