ವಿಜಯನಗರ: ಇಲ್ಲಿನ ಕೊಟ್ಟೂರು ತಾಲೂಕಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಹುಚ್ಚು ನಾಯಿ ಹಾವಳಿಗೆ (Dog Attack) ಜನರು ಸುಸ್ತಾಗಿ ಹೋಗಿದ್ದಾರೆ. ಬೀದಿ ನಾಯಿಗಳ ಕಾಟ ಒಂದು ಕಡೆಯಾದರೆ ಮತ್ತೊಂದು ಕಡೆ ಹುಚ್ಚುನಾಯಿ ಹಾವಳಿಗೆ ಜನರು ಬೇಸತ್ತು ಹೋಗಿದ್ದರು. ಒಂದೇ ವಾರದಲ್ಲಿ ಒಂಭತ್ತು ಜನರ ಮೇಲೆ ಹುಚ್ಚು ನಾಯಿ ದಾಳಿ (Dog bite) ಮಾಡಿದೆ.
ನಿವೃತ್ತ ಅಗ್ನಿಶಾಮಕ ದಳ ಅಧಿಕಾರಿ ಮಲ್ಕನಾಯ್ಕ್ ಎಂಬುವವರು ವಾಯು ವಿಹಾರಕ್ಕೆಂದು ರೈಲ್ವೆ ಸ್ಟೇಷನ್ ಕಡೆಗೆ ಹೋದಾಗ ಹುಚ್ಚು ನಾಯಿ ಹಿಂಬಾಲಿಸಿ ದಾಳಿ ಮಾಡಿದೆ. ಮಲ್ಕನಾಯ್ಕ್ ಅವರ ಕೈ-ಕಾಲನ್ನು ಹುಚ್ಚು ನಾಯಿ ಕಚ್ಚಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಾಲೆಗೆ ಹೋಗುತ್ತಿದ್ದ ಶಿಕ್ಷಕ ಹಾಲಸ್ವಾಮಿ ಎಂಬುವವರ ಮೇಲೂ ಹುಚ್ಚು ನಾಯಿ ದಾಳಿ ಮಾಡಿ ಕಚ್ಚಿದೆ.
ಪಟ್ಟಣದ ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆಯಲ್ಲೂ ಹಲವರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದೆ. ಮಾತ್ರವಲ್ಲದೆ ಮುಂಜಾನೆ ಹೊತ್ತು ನ್ಯೂಸ್ ಪೇಪರ್ ವಿತರಿಸುವ ಹುಡುಗರ ಮೇಲೂ ದಾಳಿ ಮಾಡುತ್ತಲೆ ಇದೆ.
ಹುಚ್ಚು ನಾಯಿ ದಾಳಿಗೆ ರಸ್ತೆಯಲ್ಲಿ ಭೀತಿಯಿಂದಲೇ ನಡೆದಾಡುವಂತಾಗಿದೆ. ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರು ಜತೆಯಾಗಿ ಹೋಗುವಂತಾಗಿದೆ. ಹುಚ್ಚು ನಾಯಿ ನಿಯಂತ್ರಣಕ್ಕೆ ಕೊಟ್ಟೂರು ಪಟ್ಟಣ ಪಂಚಾಯ್ತಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೊಬ್ಬರು ಕ್ಯಾರೆ ಎನ್ನುತ್ತಿಲ್ಲ. ಅಧಿಕಾರಿಗಳ ಬೇಜವಾಬ್ದಾರಿಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ