ಬೆಂಗಳೂರು: ವಾಕಿಂಗ್ಗೆ ಕರೆದುಕೊಂಡು ಹೋಗಿದ್ದಾಗ ತಪ್ಪಿಸಿಕೊಂಡ (Dog Missing) ಶ್ವಾನಕ್ಕಾಗಿ ಸತತ ಒಂದು ತಿಂಗಳಿನಿಂದ ಕುಟುಂಬವೊಂದು ಹುಡುಕಾಟ ನಡೆಸುತ್ತಿದೆ. ಉಡುಗೊರೆಯಾಗಿ ಬಂದಿದ್ದ ಶ್ವಾನವನ್ನು ಕಳೆದುಕೊಂಡ ಕುಟುಂಬದವರು ದುಃಖದಲ್ಲೇ ದಿನದೂಡುತ್ತಿದ್ದಾರೆ. ಸದ್ಯ ನಮ್ಮ ಶ್ವಾನವನ್ನು ಹುಡುಕಿಕೊಟ್ಟರೆ 20 ಸಾವಿರ ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.
ಇಲ್ಲಿನ ಬಾಣಸವಾಡಿಯ ಓಎಂಬಿಆರ್ ಲೇಔಟ್‌ನ ನಿವಾಸಿ ಅರುಣ್ ಹಾಗೂ ಡೀನಾ ದಂಪತಿ ತಮ್ಮ ಮುದ್ದಾದ ಶ್ವಾನ ಲುಕಾವನ್ನು ಹುಡುಕಿಕೊಂಡುವಂತೆ ಮನವಿ ಮಾಡಿದ್ದಾರೆ. ಡಿಸೆಂಬರ್ 7ರ ಬೆಳಗಿನ ಜಾವ ಬೀದಿಯಲ್ಲಿ ವಾಕಿಂಗ್ ಮಾಡಲು ಹೋದ ಲುಕಾ ಮತ್ತೆ ಮರಳಿ ಮನೆಗೆ ಬರಲಿಲ್ಲ. ಒಂದು ತಿಂಗಳವರೆಗೂ ಈ ಕುಟುಂಬ ಇಡೀ ಲೇಔಟ್ ಹುಡುಕಾಡಿದರೂ ಶ್ವಾನದ ಸುಳಿವು ಮಾತ್ರ ಸಿಕ್ಕಿಲ್ಲ.
ಮಕ್ಕಳೊಂದಿಗೆ ಮಗುವಾಗಿ, ಮನೆ ಮಂದಿಗೆಲ್ಲ ಅಚ್ಚುಮೆಚ್ಚಾಗಿದ್ದ ಲುಕಾ ಈಗ ಮನೆಯಲ್ಲಿ ಇಲ್ಲದೇ ಇರುವುದರಿಂದ ಮಕ್ಕಳು ಸೇರಿ ಎಲ್ಲರೂ ದುಃಖದಲ್ಲಿದ್ದಾರೆ. ಪೊಲೀಸ್ ಠಾಣೆಗೂ ಈ ಸಂಬಂಧ ದೂರು ನೀಡಿರುವ ಕುಟುಂಬ, ತಮ್ಮ ಪ್ರೀತಿಯ ನಾಯಿಯನ್ನು ಹುಡುಕಿ ಕೊಟ್ಟವರಿಗೆ 20 ಸಾವಿರ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ | Organ Donation | ಬೈಕ್ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿದ ಕುಟುಂಬಸ್ಥರು