Site icon Vistara News

Dog Protection: ರಾಯಲಕೇರಿ ಸಮೀಪ ತೆರೆದ ಬಾವಿಯಲ್ಲಿ ಬಿದ್ದ ಶ್ವಾನದ ರಕ್ಷಣೆ

Dog Protection honnavar

#image_title

ಹೊನ್ನಾವರ: ಪಟ್ಟಣದ ರಾಯಲಕೇರಿ ಸಮೀಪ ತೆರೆದ ಬಾವಿಯಲ್ಲಿ ಬೀದಿ ನಾಯಿಯೊಂದು ಬಿದ್ದು ಒದ್ದಾಡುತ್ತಿತ್ತು. ಅದು ಕೂಗಿಕೊಳ್ಳುತ್ತಿದ್ದ, ತನ್ನನ್ನು ರಕ್ಷಣೆ ಮಾಡುವಂತೆ ಗೋಗರೆಯುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಹೀಗಾಗಿ ಸಾರ್ವಜನಿಕರು ಸಹ ರಕ್ಷಣೆಗಾಗಿ ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ. ಹೀಗಾಗಿ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.

ಸ್ಥಳೀಯರ ಮಾಹಿತಿ‌ ಮೇರೆಗೆ ಕೂಡಲೇ ಸ್ಥಳಕ್ಕಾಗಮಿಸಿದ ಹೊನ್ನಾವರ ಅಗ್ನಿಶಾಮಕ ಸಿಬ್ಬಂದಿಗಳು ತಮ್ಮ ಬಳಿ ಇರುವ ಸಲಕರಣೆಯ ಮೂಲಕ ಕಾರ್ಯಾಚರಣೆ ನಡೆಸಿ ಶ್ವಾನವನ್ನು ಮೇಲಕ್ಕೆ ಎತ್ತುವ (Dog Protection) ಮೂಲಕ‌ ಮಾನವೀಯತೆ ಮೆರೆದರು.

ಜಯಾನಂದ ಪಟಗಾರ, ಸಿಬ್ಬಂದಿ ರಮೇಶ ಚಿಕ್ಕಲಗಿ, ಡಿ.ಕೆ.ನಾಗರಾಜ, ಮಂಜುನಾಥ ಪಟಗಾರ, ಆನಂದ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Panchamasali Reservation : ಪಂಚಮಸಾಲಿಗಳಿಗೆ 2ಸಿ, 2ಡಿ ಮೀಸಲಾತಿ ನೀಡಲು ಇದ್ದ ತಡೆ ತೆರವು, ಸಿಎಂಗೆ ಬಿಗ್‌ ರಿಲೀಫ್‌?

Exit mobile version