ಬೆಂಗಳೂರು: ರಾಜಧಾನಿ ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರವಾಗಿರಿ. ನೀವೇನಾದರೂ ನಿಮ್ಮ ಮುದ್ದು ನಾಯಿಯನ್ನು ಮನೆಯಿಂದ ಹೊರಗೆ ಓಡಾಡಲು ಬಿಟ್ಟರೆ ಅದು ಕಳ್ಳರ ಪಾಲಾಗುತ್ತದೆ. ಏಕೆಂದರೆ ಮನೆಗಳ್ಳತನ, ವಾಹನ ಕಳ್ಳತನ ಮಾಡುತ್ತಿದ್ದ ಕಳ್ಳರು ಇದೀಗ ಶ್ವಾನವನ್ನು ಕದ್ದು ಪರಾರಿ (Dog thieves In Bengaluru) ಆಗುತ್ತಿರುವುದು ಕಂಡು ಬರುತ್ತಿದೆ.
ಬೆಂಗಳೂರಿನಲ್ಲಿ ನಾಯಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಬೈಕ್‌ನಲ್ಲಿ ಬಂದ ಮೂವರು ಯುವಕರು ಸಿನಿಮೀಯ ಶೈಲಿಯಲ್ಲಿ ಸಾಕು ನಾಯಿ ಕದ್ದು ಪರಾರಿ ಆಗಿರುವ ಘಟನೆ ನಡೆದಿದೆ. ದುಬಾರಿ ಬೆಲೆಯ ಹಸ್ಕಿ ನಾಯಿ ಮರಿಯನ್ನು ಕದ್ದೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗೆ ದುಬಾರಿ ಬೆಲೆಯ ಶ್ವಾನವನ್ನು ಕದ್ದು ಬೇರೆಯವರಿಗೆ ಡಬಲ್ ಹಣಕ್ಕೆ ಮಾರಾಟ ಮಾಡಲಾಗುತ್ತದೆ.
ಮನೆಗಳ ಬಳಿ ನಿಗಾವಹಿಸುವ ಈ ಆಸಾಮಿಗಳು, ಮಾಲೀಕರು ಶ್ವಾನವನ್ನು ಹೊರಗಡೆ ವಾಕ್ ಮಾಡಲು ಬಿಟ್ಟಾಗ, ಹಿಂಬಾಲಿಸಿ ಕಳ್ಳತನ ಮಾಡುತ್ತಿದ್ದಾರೆ. ನಗರದ ಫ್ರೇಜರ್ ಟೌನ್‌ನಲ್ಲಿ ಬೈಕ್‌ನಲ್ಲಿ ಬಂದ ಮೂವರು ಯುವಕರು ಜೋಯಿ ಎಂಬ ಹೆಸರಿನ ನಾಯಿಯನ್ನು ಇದೇ ಮಾರ್ಚ್ 17ರ ಬೆಳಗ್ಗೆ ಕದ್ದು ಪರಾರಿ ಆಗಿದ್ದಾರೆ.
ಇದನ್ನೂ ಓದಿ: Religious Conversion: ಶಿವಮೊಗ್ಗದಲ್ಲಿ ಆಮಿಷವೊಡ್ಡಿ ಮತಾಂತರಕ್ಕೆ ಯತ್ನ; ಪಾದ್ರಿ ಸೇರಿ ಹಲವರು ಪೊಲೀಸ್ ವಶಕ್ಕೆ
ಪೆಟ್ರೋಲ್ ಬಂಕ್ ಬಳಿ ಬರುತ್ತಿದ್ದ ನಾಯಿಯನ್ನು ಕಾಳಜಿ ಮಾಡುವ ರೀತಿ ನಾಟಕ ಮಾಡಿ ಹಿಡಿದುಕೊಂಡು ಬೈಕ್‌ನಲ್ಲಿ ಹಾಕಿಕೊಂಡು ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಸೈಯದ್ ಎಂಬುವರು ಪೋಸ್ಟ್ ಮೂಲಕ ಜೋಯಿ ಎಂಬ ನಾಯಿ ಫೋಟೋ ಹಾಕಿ ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಯುವಕರು ಕಳ್ಳತನ ಮಾಡುವ ದೃಶ್ಯವನ್ನು ಸಹ ಪೋಸ್ಟ್ ಮಾಡಿದ್ದು, ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ