ಸೊರಬ: ಸಮಾಜವು (Society) ಸನ್ಮಾರ್ಗದಲ್ಲಿ ನಡೆಯಲು ಮಠ-ಮಾನ್ಯಗಳ ಪಾತ್ರ ಮಹತ್ವದ್ದಾಗಿದ್ದು, ಜಡೆ ಸಂಸ್ಥಾನ ಮಠವು (Jade Samsthan Math) ತಾಲೂಕಿನಲ್ಲಿಯೇ ಗುರುಸ್ಥಾನದಲ್ಲಿದ್ದು ಮುನ್ನೆಡೆಯುತ್ತಿದೆ ಎಂದು ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಡಾ. ರಾಜು ಎಂ. ತಲ್ಲೂರು ಹೇಳಿದರು.
ತಾಲೂಕಿನ ಜಡೆ ಸಂಸ್ಥಾನ ಮಠದ ಆವರಣದಲ್ಲಿ ಬುಧವಾರ ಶ್ರೀ ಮಠದ ಅಭಿವೃದ್ಧಿಗಾಗಿ ಒಂದು ಲಕ್ಷ ರೂ., ದೇಣಿಗೆಯ ಚೆಕ್‌ನ್ನು ಮಠದ ಶ್ರೀ ಡಾ. ಮಹಾಂತ ಸ್ವಾಮೀಜಿ ಅವರಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಜಡೆ ಸಂಸ್ಥಾನ ಮಠವು ತಾಲೂಕು ಮಾತ್ರವಲ್ಲದೇ ನೆರೆಯ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಅಪಾರ ಸಂಖ್ಯೆಯ ಶಿಷ್ಯವರ್ಗವನ್ನು ಹೊಂದಿದೆ. ಸರ್ವ ಧರ್ಮಿಯರಿಗೆ ಹಾಗೂ ಸರ್ವ ಜನಾಂಗದವರಿಗೆ ಶ್ರೀ ಮಠದ ಡಾ. ಮಹಾಂತ ಸ್ವಾಮೀಜಿ ಅವರು ಮಾರ್ಗದರ್ಶನ ನೀಡುತ್ತಾ ಬರುತ್ತಿದ್ದಾರೆ.
ಇದನ್ನೂ ಓದಿ: Chandrayaan 3 : ಚಂದ್ರಯಾನ ಯಶಸ್ಸಿನ ಬಗ್ಗೆ ಇಸ್ರೊ ಅಧ್ಯಕ್ಷ ಸೋಮನಾಥ್ ಹೇಳಿದ್ದೇನು?
ವಿಶೇಷವಾಗಿ ಶ್ರೀ ಮಠದ ಆವರಣದಲ್ಲಿರುವ ಶ್ರೀ ಸಿದ್ಧವೃಷಭೇಂದ್ರ ಮಹಾಸ್ವಾಮೀಜಿ ಕತೃಗದ್ದುಗೆ ಭಕ್ತರಿಗೆ ಇಷ್ಟಾರ್ಥ ಸಿದ್ಧಿಸುವ ಶಕ್ತಿ ಹೊಂದಿದೆ. ಕತೃಗದ್ದುಗೆಯ ಶಿಲಾಮಯ ಕಟ್ಟಡ ನಿರ್ಮಾಣವಾಗುತ್ತಿದ್ದು, ಈ ನಿಟ್ಟಿನಲ್ಲಿ ತಮ್ಮ ಕೈಲಾದ ಸೇವೆಯನ್ನು ಸಲ್ಲಿಸುತ್ತಿರುವುದಾಗಿ ತಿಳಿಸಿದರು.
ಇದನ್ನೂ ಓದಿ: ಚಂದ್ರಯಾನ-3 ಯಶಸ್ಸು; ಐರ್ಲೆಂಡ್ನಲ್ಲಿ ಸಂಭ್ರಮಿಸಿದ ಬುಮ್ರಾ ಪಡೆ; ಸಚಿನ್ ಸೇರಿ ಹಲವರಿಂದ ಟ್ವೀಟ್ ಮೂಲಕ ಶ್ಲಾಘನೆ
ಈ ಸಂದರ್ಭದಲ್ಲಿ ಉದ್ಯಮಿಗಳಾದ ವೆಂಕಟೇಶ ಕಾಮತ್ ಹೆಗಡೆ, ಮನೋಜ್ ಕಾಮತ್, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ್ರು, ಪ್ರಮುಖರಾದ ಬಂಗಾರಪ್ಪಗೌಡ್ರು ಕುಪ್ಪೆ, ಮಲ್ಲಿಕಗೌಡ, ಕುಮಾರ್ ಉರಣಕರ್, ಗಂಗಾಧರ್, ಮಲ್ಲಿಕಾರ್ಜುನ, ಮಹೇಶ್ ಪಾಟೀಲ್, ಬಸವರಾಜ ಚೌಟಿ, ಬಂಗಾರ ಸ್ವಾಮಿ ಸೇರಿದಂತೆ ಇತರರಿದ್ದರು.