ನೆಲಮಂಗಲ: ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತೆ, ಭೂಮಿ ಹೊತ್ತಿ ಉರಿದರೆ ಏನಾಗಬಹುದು? ಅಂಥ ಪ್ರಸಂಗದ ಬಗ್ಗೆ ಮುಂದೆ ಭವಿಷ್ಯ ನುಡಿಯುತ್ತೇನೆ. ಈಗ ಕೊರೊನಾ ನಾಲ್ಕನೇ ಅಲೆ ಹೆಚ್ಚು ಬಾಧಿಸುವುದಿಲ್ಲ. ಜನರು ಆತಂಕಪಡುವ ಅವಶ್ಯಕತೆ ಇಲ್ಲ. ಕೊರೊನಾ ಬರುತ್ತದೆ, ಹೋಗುತ್ತದೆ ಎಂದು ಎಂದು ಕೋಡಿಮಠದ ಸ್ವಾಮೀಜಿ (Kodi Mutt Swamiji) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕೆಪಿಸಿಸಿ ಸದಸ್ಯ ಕೃಷ್ಣಮೂರ್ತಿ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಕೋಡಿಮಠದ ಶ್ರೀಗಳು, ಕೊರೊನಾ ಬಗ್ಗೆ ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರಲ್ಲದೆ, ಸಾವು-ನೋವು ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಕರ್ನಾಟಕ ರಾಜಕೀಯ ವಿಚಾರದ ಬಗ್ಗೆ ಪ್ರಸ್ತಾಪ ಮಾಡಿರುವ ಕೋಡಿಮಠದ ಸ್ವಾಮೀಜಿ, ಪಕ್ಷಗಳು ಒಡೆಯುತ್ತವೆ ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಅದು ಇದೀಗ ನಿಜವಾಗುತ್ತಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹೊಸ ಪಕ್ಷ ಸ್ಥಾಪನೆ ಮಾಡುತ್ತಿರುವ ಬಗ್ಗೆ ಪ್ರಸ್ತಾಪಿಸಿದರು.
ಆದರೆ, ಒಲೆ ಹೊತ್ತಿ ಉರಿದರೆ ಅಡುಗೆ ಆಗುತ್ತೆ, ಭೂಮಿ ಹೊತ್ತಿ ಉರಿದರೆ ಏನಾಗಬಹುದು? ಅಂಥ ಪ್ರಸಂಗದ ಬಗ್ಗೆ ಮುಂದೆ ಭವಿಷ್ಯ ನುಡಿಯುತ್ತೇನೆ ಎಂದು ಹೇಳಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಯಾವುದರ ಬಗ್ಗೆ ಶ್ರೀಗಳು ಈ ಹೇಳಿಕೆ ನೀಡಿದ್ದಾರೆ. ಭೂಮಿ ಹೊತ್ತಿ ಉರಿದರೆ ಎಂದರೆ ಏನರ್ಥ ಎಂಬ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿವೆ.
ಇದನ್ನೂ ಓದಿ | Black Day | ದ.ಕ., ಉ.ಕ, ಉಡುಪಿ, ಬಾಗಲಕೋಟೆಯಲ್ಲಿ ರಸ್ತೆ ಅಪಘಾತ; ಶಾಲಾ ಬಾಲಕ ಸೇರಿ ಮೂವರ ಸಾವು, ಹಲವರು ಗಂಭೀರ