Site icon Vistara News

Rashtrotthana Parishat: ಸಾಹಿತ್ಯ ಕೃಷಿ ಮೇಲೆ ಪುಸ್ತಕ ಓದುವಿಕೆ ಬಹಳ ಪ್ರಭಾವ ಬೀರಿದೆ: ಡಾ. ಬಾಬು ಕೃಷ್ಣಮೂರ್ತಿ

Dr. Babu Krishnamurthy says Reading a book that started from childhood has had a great impact on the cultivation of literature

#image_title

ಬೆಂಗಳೂರು: ತಮ್ಮ ಸಾಹಿತ್ಯ ಕೃಷಿಗೆ ಬಾಲ್ಯದಿಂದ, ಸುಮಾರು ಐದರ ಎಳವೆಯಿಂದಲೇ ಪ್ರಾರಂಭಿಸಿದ್ದ ಪುಸ್ತಕಗಳ ಓದುವಿಕೆ ಬಹಳವಾಗಿ ಪ್ರಭಾವಿಸಿತು. ನಂತರದಲ್ಲಿ ಬಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಕಟ ಒಡನಾಟದಿಂದ ಬಹುಕಾಲದವರೆಗೆ ಪೂರ್ಣಾವಧಿ ಕಾರ್ಯಕರ್ತನಾಗಲು ಸಾಧ್ಯವಾಗದೇ ಹೋದರೂ, ರಾಷ್ಟ್ರೀಯ ವಿಚಾರ ಪ್ರೇರಕ, ಬೋಧಕ ಸಾಹಿತ್ಯ ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಾಧ್ಯವಾಯಿತು ಎಂದು ಪ್ರಸಿದ್ಧ ಲೇಖಕ, 2021-22ನೇ ಸಾಲಿನ ʼಪಂಪ ಪ್ರಶಸ್ತಿʼ ಪುರಸ್ಕೃತರಾದ ಡಾ. ಬಾಬು ಕೃಷ್ಣಮೂರ್ತಿ ತಿಳಿಸಿದರು.

ರಾಷ್ಟ್ರೋತ್ಥಾನ ಪರಿಷತ್‌ನಿಂದ (Rashtrotthana Parishat) ನಗರದ ಕೆಂಪೇಗೌಡ ನಗರದ ರಾಷ್ಟ್ರೋತ್ಥಾನ ಸಂಸ್ಥೆಯ ಕೇಶವ ಶಿಲ್ಪದಲ್ಲಿ ಕ್ರಾಂತಿ ಕೇಸರಿ ಚಂದ್ರಶೇಖರ್‌ ಆಜಾದ್‌ ಜೀವನಗಾಥೆ ʼಅಜೇಯʼ ಸೇರಿ ಹಲವು ಕೃತಿಗಳ ಮೂಲಕ ಭಾರತೀಯ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಮುಖವನ್ನು ನಾಡಿಗೆ ಪರಿಚಯಿಸಿರುವ ಪ್ರಸಿದ್ಧ ಲೇಖಕ, 2021-22ನೇ ಸಾಲಿನ ʼಪಂಪ ಪ್ರಶಸ್ತಿʼ ಪುರಸ್ಕೃತ ಡಾ. ಬಾಬು ಕೃಷ್ಣಮೂರ್ತಿ ಅವರೊಂದಿಗೆ ಮಾತುಕತೆ ಎಂಬ ವಿಶೇಷ ಸಂವಾದ ಕಾರ್ಯಕ್ರಮವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮನ ಬಿಚ್ಚಿ ಮಾತನಾಡಿದ ಡಾ. ಬಾಬು ಕೃಷ್ಣಮೂರ್ತಿ ಅವರು, ಹಲವು ವಿಚಾರಗಳನ್ನು ಓದುಗ ಅಭಿಮಾನಿಗಳ ಜತೆ ಹಂಚಿಕೊಂಡರು.

ಸ್ವಾತಂತ್ರ್ಯವೀರ ಚಂದ್ರಶೇಖರ ಆಜಾದ್ ಕುರಿತು ಆರು ವರ್ಷ ಕಾಲ ಸಂಶೋಧನೆ, ಸ್ಥಳವೀಕ್ಷಣೆ ನಡೆಸಿ ರಚಿಸಿದ ಕೃತಿ ‘ಅಜೇಯ’ ಇಂದಿಗೂ ಸಹ ಈ ಕೃತಿ ಜನ ಮಾನಸದಲ್ಲಿ ಉಳಿದುಕೊಂಡಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ತಮ್ಮ ಮೂಲಕ ಬಂದಿರುವ 20 ಲಕ್ಷ ರೂ. ದೇಣಿಗೆಯನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ನೀಡುವುದಾಗಿ ಘೋಷಿಸಿದರು. 50 ವರ್ಷ ಪೂರೈಸುತ್ತಿರುವ ತಮ್ಮ ಅಜೇಯ ಕೃತಿ ರಚನೆಯ ಸಂದರ್ಭದಲ್ಲಿ ಆದ ಕ್ರಾಂತಿಕಾರಿಗಳ ವಿಚಾರ ಹಾಗೂ ವ್ಯಕ್ತಿಗಳ ದೀರ್ಘಕಾಲದ ಅನುಸಂಧಾನದ ಬಗೆಗೆ ಎಳೆಎಳೆಯಾಗಿ ಬಿಡಿಸಿಟ್ಟರು.

ಇದನ್ನೂ ಓದಿ | ವಾರದ ವ್ಯಕ್ತಿಚಿತ್ರ: ಅಗಣಿತ ಸಾಧನೆಗಳ ಗಣಿತಜ್ಞ, ಸಂಖ್ಯಾಶಾಸ್ತ್ರದಲ್ಲಿ 75 ವರ್ಷ ಪೂರೈಸಿದ ಕನ್ನಡಿಗ ಸಿ.ಆರ್‌.ರಾವ್

ಎರಡು ಗಂಟೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಸುಮಾರು ಒಂದು ಗಂಟೆಯ ಕಾಲ ಭರಪೂರ ಪ್ರಶ್ನೆಗಳನ್ನು ಕೇಳಿದರು. ಕಾರ್ಯಕ್ರಮದಲ್ಲಿ ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ, ಪರಿಷತ್ತಿನ ಕೋಶಾಧ್ಯಕ್ಷ ಕೆ. ಎಸ್. ನಾರಾಯಣ, ಹಿರಿಯ ಪತ್ರಕರ್ತ ಮಂಜುನಾಥ ಭಟ್, ಹಿರಿಯ ಲೇಖಕ ಮಂಜುನಾಥ ಅಜ್ಜಂಪುರ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

Exit mobile version