Site icon Vistara News

Savarkar Award: ಸಾವರ್ಕರ್‌ ಬಗ್ಗೆ ಓದಿದ್ರೆ ಜನ್ಮ ಸಾರ್ಥಕ, ಆದ್ರೆ ಶಿಕ್ಷೆ ಕಟ್ಟಿಟ್ಟ ಬುತ್ತಿ: ಡಾ.ಜಿ.ಬಿ.ಹರೀಶ

Dr GB Harish

ಬೆಂಗಳೂರು: ಸಾವರ್ಕರ್‌ ಅವರ (Savarkar Award) ಬಗ್ಗೆ ಯಾವುದೇ ವ್ಯಕ್ತಿ ಮಾಡಬಾರದ ಕೆಲಸವೆಂದರೆ ಅವರ ಭಾಷಣ ಕೇಳುವುದು, ಅವರ ಪುಸ್ತಕ ಓದುವುದು. ಒಂದು ವೇಳೆ ಓದಿದಿರೋ ಕೆಟ್ಟಿರಿ ಎಂದರ್ಥ. ಹೇಗೆಂದರೆ ನಿಮ್ಮ ಜೀವನ ಸುಗಮವಾಯಿತು, ಅನೇಕ ಜನ್ಮಗಳವರೆಗೆ ಅದು ಸಾರ್ಥಕವಾಗುತ್ತದೆ. ಆದರೆ, ಈ ಜನ್ಮದಲ್ಲಿ ಪೊಲೀಸ್‌ ವಿಚಾರಣೆ, ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂದು ಸಾವರ್ಕರ್ ಸಾಹಿತ್ಯ ಸಂಘದ ಅಧ್ಯಕ್ಷ ಡಾ.ಜಿ.ಬಿ.ಹರೀಶ ಹೇಳಿದರು.

ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವರ್ಕರ್ ಸಾಹಿತ್ಯ ಸಂಘದಿಂದ ಶನಿವಾರ ಆಯೋಜಿಸಲಾಗಿದ್ದ ಮಾತು, ಮಂಥನ, ವೀರ ಸಾವರ್ಕರ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ಸಾವರ್ಕರ್‌ ಎಂದರೆ ಅದೊಂದು ಬೆಂಕಿಯಲ್ಲಿ ಅರಳಿದ ಹೂವು ಎಂದು ನಾನು ಎಸ್‌.ಆರ್‌.ಲೀಲಾ ರಚನೆಯ ಚಿನ್ನದ ಯುಗಗಳು ಪುಸ್ತಕದ ಮುನ್ನಡಿಯಲ್ಲಿ ಬರೆದೆ. ಅದು ಅನಂತ್‌ ನಾಗ್‌ ಸಿನಿಮಾದ ಡೈಲಾಗ್‌ ಆಗಿದೆ. ಇನ್ನು ಸಾವರ್ಕರ್‌ ಜತೆ ಹೆಂಡತಿ ಅಷ್ಟು ವರ್ಷ ಬದುಕಿದರಲ್ಲ. ಯಾವತ್ತು ಬೇಕಾದರೂ ಸ್ಫೋಟವಾಗಬಲ್ಲ ಅಗ್ನಿಪರ್ವತದ ಪಕ್ಕದಲ್ಲಿ ಆಕೆ ಬದುಕುತ್ತಿದ್ದರು ಎಂದು ಲೇಖಕ ಧನಂಜಯ ಕೀರ್‌ ಹೇಳಿದ್ದರು ಎಂದು ಡಾ.ಜಿ.ಬಿ.ಹರೀಶ ಸ್ಮರಿಸಿದರು.

ಇದನ್ನೂ ಓದಿ | ರಾಜ ಮಾರ್ಗ ಅಂಕಣ : ನಾನು ಆಜಾದ್‌, ಇನ್ನೆಂದೂ ನಿಮ್ಮ ಕೈಗೆ ಸಿಗಲಾರೆ; ಆ ಕ್ರಾಂತಿಕಾರಿ ಸಾವಿನಲ್ಲೂ ಮಾತು ಉಳಿಸಿಕೊಂಡಿದ್ದ!

ಸಾವರ್ಕರ್ ಸಾಹಿತ್ಯ ಸಂಘದ ಟ್ರಸ್ಟಿ ಹರ್ಷ ಸಮೃದ್ಧ್‌ ಮಾತನಾಡಿ, ಅಂಡಮಾನ್‌ ಜೈಲಿನಿಂದ ಸಾವರ್ಕರ್‌ ಅವರು ರತ್ನಗಿರಿ ಜೈಲಿಗೆ ಸ್ಥಳಾಂತರವಾಗಿದ್ದಾಗ 1924ರಲ್ಲಿ ಭಗತ್‌ ಸಿಂಗ್‌ ಹುತಾತ್ಮರಾದರು. ಇದರಿಂದ ನೊಂದ ಅವರು ಭಗತ್‌ ಸಿಂಗ್‌ ಬಗ್ಗೆ ಗೀತೆ ರಚಿಸಿದರು. ನಂತರ ಅನೇಕ ಯುವಕರಿಗೆ ಆ ಗೀತೆಯನ್ನು ಕಂಠಪಾಠ ಮಾಡಿಸಿದರು ಎಂದು ಹೇಳಿದರು.

ಜೈಲಿನಲ್ಲಿದ್ದುಕೊಂಡೇ ಅತ್ಯಂತ ಪ್ರಖರವಾರ ಕ್ರಾಂತಿಗೀತೆಯನ್ನು ರಚಿಸಿದ್ದ ಸಾವರ್ಕರ್‌, ಜೈಲಿನಲ್ಲಿ ಏನಾದರೂ ಬರೆದರೆ ಶಿಕ್ಷೆಯಾಗುತ್ತಿದ್ದರಿಂದ ಗೀತೆಗಳನ್ನು ಬರೆದು ಕಂಠಪಾಠ ಮಾಡಿ, ಅಳಿಸಿ ಹಾಕುತ್ತಿದ್ದರು. ರತ್ನಗಿರಿ ಜೈಲಿಗೆ ಸ್ಥಳಾಂತರವಾದ ನಂತರ ಕಮಲಾ, ಗೋಮಂತಕ ಕವಿತೆಗಳು ಪ್ರಕಟಣೆಯಾದವು ಎಂದು ತಿಳಿಸಿದರು.

ಸಾವರ್ಕರ್ ಸಾಹಿತ್ಯ ಸಂಘದ ಟ್ರಸ್ಟಿ ಡಾ.ಎಸ್.ಆರ್.ಲೀಲಾ ಮಾತನಾಡಿ, ಹಿಂದವಿ ಸಾಮ್ರಾಜ್ಯದ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಹಿಂದುತ್ವಕ್ಕಾಗಿ ದುಡಿದು, ದೇಶಕ್ಕಾಗಿ ಬಲಿದಾನ ನೀಡಿದ ಪೇಶ್ವೆಗಳು, ಅಸಂಖ್ಯಾತ ದೇಶ ಭಕ್ತರ ಕ್ರಾಂತಿಕಾರಿ ಹೋರಾಟಗಳ ಬಗ್ಗೆ ವೀರ ಸಾವರ್ಕರ್ ಅವರ ಬರವಣಿಗೆ, ಕವಿತೆಗಳಲ್ಲಿ ಎದ್ದು ಕಾಣುತ್ತದೆ ಎಂದು ಹೇಳಿದರು.

ಹಿರಿಯ ಲೇಖಕ ಬಿ.ಪಿ.ಪ್ರೇಮ್‌ಕುಮಾರ್ ಅವರಿಗೆ ವೀರ ಸಾವರ್ಕರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ | Independence Day 2023 : ಹೈದರಾಬಾದ್‌ ಕರ್ನಾಟಕದಲ್ಲಿ ಬ್ರಿಟಿಷರ ವಿರುದ್ಧ ನಡೆದಿತ್ತು ಮಹಾ ದಂಗೆ

ಹಿರಿಯ ಲೇಖಕ ಬಿ.ಪಿ.ಪ್ರೇಮ್‌ಕುಮಾರ್ ಅವರಿಗೆ ವೀರ ಸಾವರ್ಕರ್ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ, ಸಂಶೋಧಕಿ ಡಾ. ಎಸ್‌.ಆರ್.ಲೀಲಾ ಉಪಸ್ಥಿತರಿದ್ದರು.

Exit mobile version