ಶಿರಸಿ: ಖ್ಯಾತ ಆಯುರ್ವೇದ ವೈದ್ಯ, ಅಖಿಲ ಕರ್ನಾಟಕ ಹವ್ಯಕ ಮಹಾಸಭಾದ ಅಧ್ಯಕ್ಷ ಡಾ.ಗಿರಿಧರ ಕಜೆ ಅವರ ಆಯುರ್ವೇದ ಸರಣಿ ಕೃತಿಗಳ ಲೋಕಾರ್ಪಣೆಯ ಭಾಗವಾಗಿ ನಾಲ್ಕನೇ ಕೃತಿ ಆಯುರ್ವೇದ ಅಂತರಂಗ- ಆರೋಗ್ಯ ಬಹಿರಂಗ ‘ಔನ್ನತ್ಯ’ ಕೃತಿ ಬಿಡುಗಡೆ ಸಮಾರಂಭವನ್ನು ಆ.7ರಂದು ಸಂಜೆ 4.30ಕ್ಕೆ ಶಿರಸಿ ನಗರದ ಸಾಮ್ರಾಟ್ ಅತಿಥಿಗೃಹದ ವಿನಾಯಕ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೃತಿ ಬಿಡುಗಡೆ ಮಾಡಿ, ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಕೃತಿಯ ಕುರಿತು ವಿದ್ಯಾವಾಚಸ್ಪತಿ ವಿ. ಉಮಾಕಾಂತ ಭಟ್ಟ ಕೆರೇಕೈ ಮಾತನಾಡಲಿದ್ದಾರೆ. ಅಭ್ಯಾಗತರಾಗಿ ವಾಗ್ಮಿ ಮೋಹನ ಭಾಸ್ಕರ ಹೆಗಡೆ ಹೆರವಟ್ಟ ಪಾಲ್ಗೊಳ್ಳಲಿದ್ದು, ಕೃತಿಕಾರ ಡಾ. ಗಿರಿಧರ ಕಜೆ ಆಶಯ ನುಡಿಯನ್ನು ಪ್ರಸ್ತಾಪಿಸಲಿದ್ದಾರೆ. ಸಿದ್ದಾಪುರದ ಆಯುರ್ವೇದ ಮಹಾವಿದ್ಯಾಲಯ, ವಿಶ್ವಶಾಂತಿ ಸೇವಾ ಟ್ರಸ್ಟ್ ಕರ್ನಾಟಕ ಹಾಗೂ ಸೆಲ್ಕೋ ಸೋಲಾರ್ ಸಂಸ್ಥೆ ಸಹಭಾಗಿತ್ವದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಡಾ. ಗಿರಿಧರ ಕಜೆ ಅವರು ಆಯುರ್ವೇದ ಜ್ಞಾನ ಯಾನದ ಭಾಗವಾಗಿ ಒಟ್ಟು 16 ಕೃತಿಗಳನ್ನು ಬಿಡುಗಡೆ ಮಾಡಲಿದ್ದು, ನಾಲ್ಕನೇಯ ಕೃತಿ ಔನ್ನತ್ಯ ಬಿಡುಗಡೆಗೆ ಸಜ್ಜಾಗಿದೆ. ಕೃತಿಗೆ ಮುನ್ನುಡಿಯನ್ನು ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಬರೆದಿದ್ದರೆ, ಬೆನ್ನುಡಿಯನ್ನು ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್.ಚನ್ನೇಗೌಡ ಬರೆದಿದ್ದಾರೆ.
ಇದನ್ನೂ ಓದಿ | Sunday read: ಈ ಪುಸ್ತಕಗಳನ್ನು ಒಂದು ಸಲ ಓದಿ, ನಿಮ್ಮ ಬದುಕು ಬದಲಿಸಿಕೊಳ್ಳಲು ಸ್ಫೂರ್ತಿಯಾಗದಿದ್ದರೆ ಕೇಳಿ!