ಬೆಂಗಳೂರು: ಸಂಶೋಧಕಿ, ಕಾದಂಬರಿಗಾರ್ತಿ, ಕವಯಿತ್ರಿ ಆಗಿರುವ ಡಾ. ಜಯದೇವಿ ಗಾಯಕವಾಡ (Dr. Jayadevi Gaikwad) ಅವರು ಕೇಂದ್ರ ಸಾಹಿತ್ಯ ಅಕಾಡೆಮಿಯ (Central Sahitya Academy) ಕನ್ನಡ ಸಲಹಾ ಸಮಿತಿಯ ಸದದ್ಯರಾಗಿ ಆಯ್ಕೆ ಆಗಿದ್ದಾರೆ.
ಗಾಯಕವಾಡ ಅವರು ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪರಿಶೀಲನಾ ಸಮಿತಿಯ ಸದಸ್ಯರೂ ಆಗಿದ್ದಾರೆ. ಇದೀಗ ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿದ್ದಕ್ಕಾಗಿ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನದ ಮಾಲೀಕರಾದ ಬಸವರಾಜ ಜಿ ಕೊನೇಕ್, ಪ್ರಕಾಶನದ ಪರಾಮರ್ಶಕ ಮಂಡಳಿಯ ಸದಸ್ಯರಾದ ಡಾ.ಸ್ವಾಮಿರಾವ ಕುಲಕರ್ಣಿ, ಡಾ. ಡಿ. ಬಿ.ನಾಯಕ, ಡಾ.ಎಚ್. ಟಿ.ಪೋತೆ, ಡಾ.ಮೀನಾಕ್ಷಿ ಬಾಳಿ, ಡಾ. ಗವಿಸಿದ್ದಪ್ಪ ಪಾಟೀಲ ಹಾಗೂ ಪರಿಶೀಲನಾ ಸಮಿತಿಯ ಸದಸ್ಯರಾದ ಡಾ. ಶಿವರಾಜ ಪಾಟೀಲ, ಡಾ. ಶ್ರೀಶೈಲ್ ನಾಗರಾಳ, ಡಾ. ಚಿ.ಸಿ. ನಿಂಗಣ್ಣ, ಕಾವ್ಯಶ್ರೀ ಮಹಾಗಾಂವಕರ್, ಡಾ. ಶರಣಬಸಪ್ಪ ವಡ್ಡನಕೇರಿ ಜತೆಗೆ ಸಿದ್ದಲಿಂಗ.ಬಿ.ಕೊನೇಕ್, ಶರಣು. ಬಿ. ಕೊನೇಕ್ ಅವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: Mysterious death : ಅಕ್ಕಪಕ್ಕದ ಮನೆಯ ಇಬ್ಬರು ಯುವತಿಯರು ಒಂದೇ ದಿನ ಹೊಟ್ಟೆನೋವಿನಿಂದ ಸಾವು; ಹಲವು ಅನುಮಾನ
ಯಾಜ್ಞಸೇನಿಯ ಆತ್ಮಕಥನ ಡಾ. ಜಯದೇವಿ ಗಾಯಕವಾಡ ಅವರ ಮೊದಲ ಕಾದಂಬರಿ ಆಗಿದೆ. ಅವರು ಬರೆದದ್ದು ಕೆಲವೇ ಕೃತಿಗಳನ್ನಾದರೂ ಮೌಲಿಕ ಕೃತಿಗಳನ್ನು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಜಯದೇವಿ ಅವರ ಸಾಹಿತ್ಯ ಸೇವೆಗೆ ಅಂತಾರಾಷ್ಟ್ರೀಯ ಮಹಿಳಾ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತು, ರುಕ್ಮಿಣಿ ಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ, ಸುವರ್ಣ ಕರ್ನಾಟಕ ರತ್ನ ಪ್ರಶಸ್ತಿ ಸೇರಿದಂತೆ ಹತ್ತಾರು ಪ್ರಶಸ್ತಿಗಳನ್ನು ಮೂಡಿಗೇರಿಸಿಕೊಂಡಿದ್ದಾರೆ. ಹೇಗೆ ಹೇಳಲಿ ನಾನು, ಮೂವತ್ತೊಂದು ಗಜಲ್‌ಗಳು ಜಯದೇವಿ ಅವರ ಕವನ ಸಂಕಲನಗಳು.