ಬೆಂಗಳೂರು: ನಗರದ ಪ್ರತಿಷ್ಠಿತ ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಎಂ.ಆರ್. ಜಯರಾಮ್ ಅವರು ವಿಸ್ತಾರ ನ್ಯೂಸ್ ಕಚೇರಿಗೆ ಗುರುವಾರ ಭೇಟಿ ನೀಡಿ, ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವಿಸ್ತಾರ ನ್ಯೂಸ್ ಅಳವಡಿಸಿಕೊಂಡಿರುವ ಅತ್ಯಾಧುನಿಕ ವ್ಯವಸ್ಥೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ವಿಸ್ತಾರ ಮೀಡಿಯಾ ಆರಂಭಿಸಿಸಿರುವ ನ್ಯೂಸ್ ಚಾನೆಲ್, ವೆಬ್‌ಸೈಟ್ ಮತ್ತು ಯುಟ್ಯೂಬ್ ಚಾನೆಲ್‌ಗಳು ವಿಭಿನ್ನವಾಗಿವೆ. ಜನಪರವಾಗಿ ಕೆಲಸ ಮಾಡುತ್ತಿವೆ ಎಂದು ಶ್ಲಾಘಿಸಿದರು. ವಿಸ್ತಾರ ನ್ಯೂಸ್ ತಂಡದ ಕನಸು ನನಸಾಗಲಿ, ಎಲ್ಲ ಯೋಜನೆಗಳು ಯಶಸ್ವಿಯಾಗಿ ಸಾಕಾರಗೊಳ್ಳಲಿ ಎಂದು ಹಾರೈಸಿದರು.
ವಿಸ್ತಾರ ನ್ಯೂಸ್ ಸಿಇಒ ಮತ್ತು ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಮತ್ತು ಚೇರ್ಮನ್, ಎಂಡಿ ಎಚ್ ವಿ ಧರ್ಮೇಶ್ ಅವರು ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ವಿವರಿಸಿದರು. ವಿಸ್ತಾರ ನ್ಯೂಸ್ ಆಧ್ಯಾತ್ಮಿಕ ವಿಚಾರಗಳಿಗೆ ಮಹತ್ವ ನೀಡುತ್ತಿರುವ ಕುರಿತು ಗಮನ ಸೆಳೆದರು.
“ಮಾಧ್ಯಮಗಳು ಜನರಿಗೆ ಒಳ್ಳೆಯದನ್ನು ಮಾಡಬೇಕು. ಎಲ್ಲರಿಗೂ ಒಳ್ಳೆಯದಾಗುವ ವಿಷಯಗಳ ಕುರಿತೇ ಚರ್ಚೆ ನಡೆಸಬೇಕುʼʼ ಎಂದು ಸಲಹೆ ನೀಡಿದ ಜಯರಾಮ್ ಅವರು ವಿಸ್ತಾರ ನ್ಯೂಸ್ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವುದು ಖುಷಿಯ ವಿಷಯ ಎಂದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ದರ್ಮಾಧಿಕಾರಿಯಾಗಿ ಅವರು ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ವಿಸ್ತಾರ ನ್ಯೂಸ್ ಪ್ರಕಟಿಸಿದ್ದ “ಕಾಯಕಯೋಗಿʼʼ ಪ್ರಶಸ್ತಿಯನ್ನು ನೀಡಿ ಅವರನ್ನು ಗೌರವಿಸಲಾಯಿತು.
ಇದನ್ನೂ ಓದಿ | Vistara News Launch | ಕೈವಾರದ ಅಭಿವೃದ್ಧಿ ಹರಿಕಾರ ಡಾ.ಎಂ.ಆರ್.ಜಯರಾಮ್‌ಗೆ ಕಾಯಕ ಯೋಗಿ ಪುರಸ್ಕಾರ