ಬೆಂಗಳೂರಿನ ಪ್ರತಿಷ್ಠಿತ ರಾಮಯ್ಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಎಂ.ಆರ್.ಜಯರಾಮ್ ಅವರದ್ದು ಅಪರೂಪದ ಮೇರು ವ್ಯಕ್ತಿತ್ವ. ಉದ್ಯಮದಲ್ಲಿ ಮತ್ತು ಆಧ್ಯಾತ್ಮಿಕ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ.
ಶ್ರೀ ಕ್ಷೇತ್ರ ಕೈವಾರದ ಶ್ರೀ ಯೋಗಿನಾರೇಯಣ ಮಠದ ಧರ್ಮಾಧಿಕಾರಿಯಾಗಿ ಸುಕ್ಷೇತ್ರದ ಭೌತಿಕ ಅಭಿವೃದ್ಧಿ ಅಷ್ಟೇ ಅಲ್ಲದೆ, ತಾತಯ್ಯನವರ ಜೀವನ ಸಂದೇಶಗಳನ್ನು ಎಲ್ಲೆಡೆ ಪಸರಿಸುತ್ತಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಭಜನಾ ಕೇಂದ್ರಗಳ ಮೂಲಕ ಭಕ್ತಿಯ ರಸದಲ್ಲಿ ಜನರು ಮಿಂದೇಳುವಂತೆ ಮಾಡಿದ್ದಾರೆ. ಜತೆ ಜತೆಗೆ ಹಲವಾರು ಶಿಥಿಲ ದೇವಾಲಯಗಳ ಜೀರ್ಣೋದ್ಧಾರದ ಕೈಂಕರ್ಯ ಮಾಡುತ್ತಿದ್ದಾರೆ.
ಸುಕ್ಷೇತ್ರದ ಮೂಲಕ ಆರೋಗ್ಯ, ಶಿಕ್ಷಣ, ಸಾಮೂಹಿಕ ವಿವಾಹದಂತಹ ಅನೇಕ ಸೇವಾ ಚಟುವಟಿಕೆಯನ್ನು ನಡೆಸುತ್ತಿದ್ದಾರೆ. ಅನೇಕ ಧಾರ್ಮಿಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಉದ್ಯಮ ಕ್ಷೇತ್ರದಲ್ಲಿದ್ದರೂ ಅತ್ಯುನ್ನತ ಅಧ್ಯಾತ್ಮ ಜೀವನವನ್ನು ಸಾಗಿಸುತ್ತ, ಅದೇ ತತ್ವವನ್ನು ಪರಿಸರದಲ್ಲೂ ಪಸರಿಸುತ್ತಿದ್ದಾರೆ.
ಕಳೆದ 50 ವರ್ಷಗಳಿಂದ ಉದ್ಯಮ, ಅದರಲ್ಲಿಯೂ ಶೈಕ್ಷಣಿಕ ಕ್ಷೇತ್ರಕ್ಕೆ ಹಾಗೂ ಅಧ್ಯಾತ್ಮ ಕ್ಷೇತ್ರಕ್ಕೆ ಡಾ. ಜಯರಾಮ್ ಅವರ ಕೊಡುಗೆ ಅಪಾರ. ಇವರಿಗೆ ಕಾಯಕ ಯೋಗಿ’ ಪ್ರಶಸ್ತಿ ನೀಡಿ ಗೌರವಿಸಲು ವಿಸ್ತಾರ ನ್ಯೂಸ್ ಹೆಮ್ಮೆಪಡುತ್ತಿದೆ.
ಇದನ್ನೂ ಓದಿ | Vistara News Launch | ಶ್ರೀ ಡಾ. ಬಸವಲಿಂಗ ಪಟ್ಟದ್ದೇವರಿಗೆ ʼಕಾಯಕ ಯೋಗಿʼ ಪುರಸ್ಕಾರ