ಬೀದರ್: ಜಿಲ್ಲೆಯ ಹುಮ್ನಾಬಾದ್‌ನ (Bidar News) ಮಾಣಿಕ್ ಪ್ರಭು ಸಂಸ್ಥಾನಕ್ಕೆ ಆರ್‌ಎಸ್‌ಎಸ್ ಸರ ಸಂಘಚಾಲಕ ಡಾ.ಮೋಹನ್ ಭಾಗವತ್ ಅವರು ಸೋಮವಾರ ತೆರಳಿ ದರ್ಶನ ಪಡೆದರು. ಮಾಣಿಕ್ ಪ್ರಭು ಅವರ ಸಮಾಧಿ ಹಾಗೂ ಪಾದುಕೆಗಳಿಗೆ ಪೂಜೆ ಸಲ್ಲಿಸಿದ ಬಳಿಕ, ಸಂಸ್ಥಾನದ ಜ್ಞಾನರಾಜ್ ಮಹಾರಾಜ್ ಸ್ವಾಮೀಜಿ ಅವರ ಆಶೀರ್ವಾದ ಪಡೆದು, ಸಾಹಾರ್ದ ಮಾತುಕತೆ ನಡೆಸಿದರು. ನಂತರ ಅಲ್ಲಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದರು.
19ನೇ ಶತಮಾನದ ಪ್ರಾರಂಭದಲ್ಲಿದ್ದ ಜನಪ್ರಿಯ ಹಿಂದು ಸಂತರಲ್ಲಿ ಮಾಣಿಕ್ ಪ್ರಭುಗಳು ಒಬ್ಬರಾಗಿದ್ದಾರೆ. ಇವರು ಅನುಸರಿಸುತ್ತಿದ್ದ ಸಕಲಮತ ಸಿದ್ಧಾಂತವು ಆದಿ ಶಂಕರರು ಪ್ರತಿಪಾದಿಸಿದ ಅದ್ವೈತ ಸಿದ್ಧಾಂತದಿಂದ ಸಾಕಷ್ಟು ಪ್ರೇರಣೆ ಪಡೆದಿತ್ತು. ಇವರ ಅನುಯಾಯಿಗಳು ಇವರನ್ನು ದತ್ತಾತ್ರೇಯನ 4ನೇ ಅವತಾರವೆಂದೇ ನಂಬುತ್ತಾರೆ. ಹೀಗಾಗಿ ಮಾಣಿಕ್ ಪ್ರಭು ಅವರ ಸಮಾಧಿ ಸ್ಥಳವಾದ ಹುಮ್ನಾಬಾದ್ ಸಮೀಪದ ಮಾಣಿಕ್ ನಗರಕ್ಕೆ ವಿವಿಧೆಡೆಯಿಂದ ಭಕ್ತರು ಆಗಮಿಸಿ ದರ್ಶನ ಪಡೆಯುತ್ತಾರೆ.