ಮಂಗಳೂರು: ಇಲ್ಲಿನ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಎಂಬಲ್ಲಿ ಗೃಹ ಪ್ರವೇಶಕ್ಕೆ ಸಿದ್ಧವಾಗಿದ್ದ ಮನೆ ನೆಲಸಮಗೊಂಡಿದೆ. ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ 3 ದಿನದ ಹಿಂದೆ ಬೃಹತ್ ಮರವೊಂದು ಬಿದ್ದ ಪರಿಣಾಮವಾಗಿ ಮನೆಯ ಗೋಡೆಗಳಲ್ಲಿ ಬಿರುಕು ಬಿಟ್ಟಿತ್ತು.
ಜು.18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲ ತಯಾರಿ ನಡೆದಿತ್ತು. ಬಿರುಕು ಬಿಟ್ಟಿರುವ ಗೋಡೆ ರಿಪೇರಿ ಕೆಲಸವೂ ಮಾಡಲಾಗಿತ್ತು. ಆದರೆ ಅಷ್ಟರಲ್ಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ತೇಜ್ ಕುಮಾರ್ ಮತ್ತು ತಾರಾಮತಿ ದಂಪತಿಗೆ ಸೇರಿದ ಮನೆ ಇದಾಗಿದ್ದು, ಪ್ರಜ್ವಲ್ ಮತ್ತು ಉಜ್ವಲ್ ಎಂಬ ಮಕ್ಕಳು ಮನೆಯಲ್ಲಿದ್ದರು.
ಹಾಲ್ನಲ್ಲಿ ಮಲಗಿದ್ದವರು ಗುಡ್ಡ ಕುಸಿಯುವ ಮೊದಲು ಹೊರಬಂದಿದ್ದರು, ಈ ವೇಳೆ ಗುಡ್ಡ ಕುಸಿದು 3 ಬೆಡ್ ರೂಂಗಳ ತುಂಬ ಮಣ್ಣು ತುಂಬಿಕೊಂಡಿದೆ. ಗುಡ್ಡ ಕುಸಿತದಿಂದಾಗಿ ಮನೆ ಬಳಿಯಿದ್ದ 3 ಬೈಕ್ಗಳು ಮಣ್ಣಲ್ಲಿ ಸಿಲುಕಿ ಹಾನಿಯಾಗಿವೆ. ಕಷ್ಟಪಟ್ಟು ಕಟ್ಟಿದ ಕನಸಿನ ಮನೆ ಪ್ರವೇಶಿಸುವ ಮುನ್ನವೇ ಮಣ್ಣುಪಾಲಾಗಿದೆ.
ಇದನ್ನೂ ಓದಿ | Rain News | ರಾಜ್ಯಾದ್ಯಂತ ಭಾರಿ ಮಳೆ: ಕೊಡಗಲ್ಲಿ ಮನೆ ಕುಸಿತ, ಭೂಕುಸಿತ ಪ್ರದೇಶಗಳೆಡೆ ಸಚಿವರ ಜಂಟಿ ಭೇಟಿ