ಯಲ್ಲಾಪುರ: ತಾಲೂಕಿನ ಮಂಚಿಕೇರಿ ಅರಣ್ಯ ವಲಯದ ಬಿಳಕಿ, ಹೋಟಗೆರಿ, ಬೊಮ್ಮನಳ್ಳಿ ಭಾಗದಲ್ಲಿ ಅರಣ್ಯ ಪ್ರದೇಶಕ್ಕೆ ಬೆಂಕಿ ತಡೆಗಟ್ಟುವ ಸಲುವಾಗಿ ಡ್ರೋಣ್ ಮೂಲಕ ಕಾರ್ಯಾಚರಣೆ (Drone Operation) ನಡೆಸಲಾಯಿತು.
ತಾಲೂಕಿನ ವಿವಿಧ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಂಡು ಬರುತ್ತಿದ್ದು, ಮಂಚಿಕೇರಿ ಪ್ರದೇಶದಲ್ಲಿ ಕೆಲ ಕಿಡಿಗೇಡಿಗಳು ಅರಣ್ಯಕ್ಕೆ ಪದೇ ಪದೆ ಬೆಂಕಿ ಹಾಕುವ ಕಾರ್ಯ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಂಕಿ ತಗುಲಿದ ಪ್ರದೇಶವನ್ನು ಗುರುತಿಸಲು ಹಾಗೂ ಬೆಂಕಿ ಹಚ್ಚುವ ಕಿಡಿಗೇಡಿಗಳನ್ನು ಪತ್ತೆ ಹಚ್ಚಲು ಡ್ರೋಣ್ ಹಾರಾಟ ನಡೆಸಲಾಯಿತು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ಹಾಗೂ ಆರ್‌ಎಫ್‌ಒ ಅಮಿತ ಇವರ ಮಾರ್ಗದರ್ಶನದಲ್ಲಿ ಬಿಳಕಿ ಭಾಗದ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಆಗೇರ, ಬಿಟ್ ವನಪಾಲಕ ಗಣೇಶ, ಅರಣ್ಯ ವೀಕ್ಷಕರು ಕಾರ್ಯಾಚರಣೆ ನಡೆಸಿದರು.
ಇದನ್ನೂ ಓದಿ: Bhagwan Ram: ರಾಮ ಹಿಂದೂಗಳಿಗಷ್ಟೇ ದೇವರಲ್ಲ, ಎಲ್ಲರಿಗೂ ದೇವರು ಎಂದ ಕಾಶ್ಮೀರದ ಮಾಜಿ ಸಿಎಂ