Site icon Vistara News

Drone Prathap: ಅಪ್ಪನ ಜತೆ ಸೇರಿ ಮುದ್ದೆ ಮಾಡಿದ ಡ್ರೋನ್ ಪ್ರತಾಪ್

Drone Prathap

ಬೆಂಗಳೂರು: ಬಿಗ್‌ ಬಾಸ್‌ ಸೀಸನ್‌ 10ರ (BBK SEASON 10) ಮೊದಲನೇ ರನ್ನರ್ ಅಪ್ ಆದ ಡ್ರೋನ್ ಪ್ರತಾಪ್‌, ಸದ್ಯ ಕುಟುಂಬಸ್ಥರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಕುಟುಂಬದಿಂದ ಹಲವು ವರ್ಷಗಳು ದೂರವಿದ್ದ ಪ್ರತಾಪ್‌, ಬಿಗ್‌ ಬಾಸ್‌ ಶೋನಿಂದ ತಂದೆ-ತಾಯಿಯನ್ನು ಭೇಟಿಯಾಗುವಂತಾಯಿತು. ಈ ಹಿಂದೆ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿಟ್ಟು ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ಅಪ್ಪನ ಜತೆ ಮುದ್ದೆ ಮಾಡಿ ಮನೆ ಮಂದಿಗೆ ಬಡಿಸಿರುವುದು ಕಂಡುಬಂದಿದೆ.

ಪ್ರತಾಪ್‌, ತಂದೆ ಜತೆ ಮುದ್ದೆ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಬಿಗ್ ಬಾಸ್ ನಂತರ ರಿಯಾಲಿಟಿ ಶೋ ಗಿಚ್ಚಿ ಗಿಲಿಗಿಲಿಯಲ್ಲಿ ಬ್ಯುಸಿಯಾಗಿರುವ ಪ್ರತಾಪ್, ಕುಟುಂಬಸ್ಥರ ಜತೆ ಕೂತು ಊಟ ಮಾಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ಮುದ್ದೆ ಅಂದ್ರೆ ಬಹಳ ಇಷ್ಟ, ಹೀಗಾಗಿ ಅಪ್ಪನ ಜತೆ ಸೇರಿ ಮುದ್ದೆ ಮಾಡಿ, ಮನೆಯವರಿಗೆಲ್ಲ ಬಡಿಸಿದ್ದಾರೆ.

ರಿಯಾಲಿಟಿ ಶೋಗೆ ಕಂಟೆಸ್ಟೆಂಟ್ ಆಗಿ ಆಯ್ಕೆಯಾದ ಡ್ರೋನ್‌ ಪ್ರತಾಪ್‌!

ಬಿಗ್‌ ಬಾಸ್‌ ಶೋದಲ್ಲಿ ರನ್ನರ್‌ ಅಪ್‌ ಆಗಿ ಪ್ರೇಕ್ಷಕರ ಮನಗೆದ್ದಿರುವ ಪ್ರತಾಪ್‌ ಇದೀಗ, ಕಲರ್ಸ್‌ ಕನ್ನಡದ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ. ರಿಯಾಲಿಟಿ ಶೋದ ಚಿತ್ರೀಕರಣ ಕೂಡ ನಡೆಯುತ್ತಿದೆ.

ಡ್ರೋನ್ ಪ್ರತಾಪ್ ಮಾತ್ರವಲ್ಲ, ತುಕಾಲಿ ಸಂತೋಷ್, ಮೈಕಲ್ ಮತ್ತು ಇಶಾನಿ ಕೂಡ ಈ ಬಾರಿ ಗಿಚ್ಚಿಗಿಲಿಗಿಲಿಯಲ್ಲಿ ಪ್ರೇಕ್ಷಕರನ್ನು ನಕ್ಕು ನಗಿಸಲಿದ್ದಾರೆ. ಮೂವರು ಕೂಡ ಇಂದಿನಿಂದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

ಕಾಮಿಡಿ ಟಿವಿ ಶೋ ‘ಗಿಚ್ಚಿ ಗಿಲಿಗಿಲಿ’ ಮೂರನೇ ಸೀಸನ್‌ (Gicchi Gili Gili season 3) ಆರಂಭವಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಮಿಡಿ ಶೋ ‘ಗಿಚ್ಚಿ ಗಿಲಿಗಿಲಿ’ಯ ಮೂರನೇ ಸೀಸನ್ ಫೆಬ್ರವರಿ 3ರಿಂದ ಆರಂಭವಾಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 9ಕ್ಕೆ ವೀಕ್ಷಕರು ಕಾರ್ಯಕ್ರಮವನ್ನು ನೋಡಿ ಆನಂದಿಸಬಹುದು.

ಮೊದಲನೆ ಸೀಸನ್‌ನ ಮೂಲಕ ಇದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ʻಗಿಚ್ಚಿ ಗಿಲಿಗಿಲಿ’ಯ ಮೊದಲ ಸೀಸನ್‌ನಲ್ಲಿ ನಿವೇದಿತಾ ಗೌಡ, ಜಗ್ಗಪ್ಪ, ಪ್ರಶಾಂತ್, ಚಂದ್ರಪ್ರಭಾ ಮುಂತಾದವರು ಇದ್ದರು. ಮೊದಲನೇ ಸೀಸನ್‌ನಲ್ಲಿ ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದರು. ವಿನೋದ್ ಗೊಬ್ರಗಾಲ್, ನಿವೇದಿತಾ ಗೌಡ ಈ ಶೋನ ರನ್ನರ್ ಅಪ್ ಆಗಿದ್ದರು. ಗಿಚ್ಚಿ ಗಿಲಿಗಿಲಿ ಸೀಸನ್ 2 ವಿನ್ನರ್ ಪಟ್ಟವನ್ನು ಚಂದ್ರಪ್ರಭಾ ಅಲಂಕರಿಸಿದ್ದರು.

Exit mobile version