Site icon Vistara News

Drowned in Canal | ಕಾಲುವೆಯಲ್ಲಿ ಈಜಾಡಲು ಹೋಗಿ ನೀರು ಪಾಲಾದ ವಿದ್ಯಾರ್ಥಿಗಳು; ಕುಟುಂಬಸ್ಥರ ಆಕ್ರಂದನ

ವಿಜಯನಗರ: ಇಲ್ಲಿನ ಹೊಸಪೇಟೆಯ ಹೊರವಲಯದಲ್ಲಿರುವ ಕಾಲುವೆಯಲ್ಲಿ ಈಜಾಡಲು ಹೋಗಿದ್ದ ವಿದ್ಯಾರ್ಥಿಗಳು ನೀರುಪಾಲಾಗಿರುವ (Drowned in Canal) ಘಟನೆ ನಡೆದಿದೆ. 6 ಮಂದಿ ಈಜಾಡಲು ಹೋಗಿದ್ದು, ಮೂವರು ಮಾತ್ರ ವಾಪಸ್ ಆಗಿದ್ದು, ಉಳಿದ ಮೂವರು ನೀರು ಪಾಲಾಗಿದ್ದಾರೆ.

ಹೊಸಪೇಟೆಯ ವಿಜಯನಗರ ಕಾಲೇಜಿನ ಇಬ್ಬರು ಪಿಯುಸಿ ವಿದ್ಯಾರ್ಥಿಗಳು, ಒಬ್ಬ ಪದವಿ ವಿದ್ಯಾರ್ಥಿ ಆಗಿದ್ದು, ಯಶ್ವಂತ್, ಅಂಜಿನಿ, ಗುರುರಾಜ್ ನೀರುಪಾಲಾದವರು ಎಂದು ಗುರುತಿಸಲಾಗಿದೆ. ಹೊಸಪೇಟೆಯ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬದುಕುಳಿದ ಮೂವರು ವಿದ್ಯಾರ್ಥಿಗಳನ್ನು ಗ್ರಾಮೀಣ ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ನೀರುಪಾಲಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ಮುಂದುವರಿದಿದೆ.

ಹೊಸಪೇಟೆಯ ಎಂಜೆ ನಗರ, ಗುಂಡಾ ಗ್ರಾಮ, ಕೊಪ್ಪಳದ ಹೊಸ ನಿಂಗಾಪುರದ ವಿದ್ಯಾರ್ಥಿಗಳು ಎಂದು ತಿಳಿದು ಬಂದಿದೆ. ಇತ್ತ ವಿದ್ಯಾರ್ಥಿಗಳು ನೀರುಪಾಲಾದ ವಿಷಯ ತಿಳಿದ ಕುಟುಂಬಸ್ಥರ ಸ್ಥಳಕ್ಕಾಗಮಿಸಿದ್ದು, ಆಕ್ರಂದನ ಮುಗಿಲು ಮುಟ್ಟಿದೆ.

ಇದನ್ನೂ ಓದಿ | Bigg Boss Kannada | ʼಕಳಪೆʼ ನೀಡುವಾಗ ಬೇಸರ ಹೊರಹಾಕಿದ ಅಮೂಲ್ಯ ಗೌಡ!

Exit mobile version