ಉತ್ತರ ಕನ್ನಡ: ಸಮುದ್ರದಲ್ಲಿ ಈಜಲು ತೆರಳಿದವನು ನೀರಲ್ಲಿ ಮುಳುಗಿ (Drowned in river) ಮೃತಪಟ್ಟಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ದುಬ್ಬನಸಸಿ ಬಳಿ ಕಡಲತೀರದಲ್ಲಿ ನಡೆದಿದೆ. ಸೂರ್ಯಶಿವ ನಾರಾಯಣ ಪಾಂಡೆ (24) ಮೃತ ದುರ್ದೈವಿ.
ದೆಹಲಿಯಿಂದ ಗೋಕರ್ಣ ಪ್ರವಾಸಕ್ಕೆಂದು ಸೂರ್ಯಶಿವ ಜತೆಗೆ 24 ಮಂದಿ ಬಂದಿದ್ದರು. ಎಲ್ಲರೂ ಸ್ಥಳೀಯ ರೆಸಾರ್ಟ್‌ವೊಂದರಲ್ಲಿ ಉಳಿದುಕೊಂಡಿದ್ದರು. ಮಧ್ಯಾಹ್ನದ ವೇಳೆ ಸೂರ್ಯಶಿವ ಈಜಲು ತೆರಳಿದ್ದು, ಆಗ ಅಲೆಗಳಿಗೆ ಸಿಲುಕಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗೋಕರ್ಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರಕ್ಕೆ ರವಾನೆ ಮಾಡಿದ್ದಾರೆ.
ಕಾಲು ಜಾರಿ ಹೊಳೆಗೆ ಬಿದ್ದವರು ನೀರುಪಾಲು
ಹೊಳೆಯಂಚಿನಲ್ಲಿ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಇರಾಸೆಯಲ್ಲಿ ನಡೆದಿದೆ. ಕಂಚಿಮನೆಯ ದೇವಾನಂದ ಮಡವಾಳ ಹಾಗೂ ಮಾಬ್ಲೇಶ್ವರ ಮಡಿವಾಳ ನೀರಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳು.
ಇದನ್ನೂ ಓದಿ: Karnataka Election 2023: ಎಲೆಕ್ಷನ್‌ನಲ್ಲಿ ಹೂವಿನ ಹಾರಗಳ ಕಲೆಕ್ಷನ್; ಹತ್ತಾರು ಅಡಿಯ ಹೂವಿನ ಹಾರಕ್ಕೆ ಡಿಮ್ಯಾಂಡ್
ಹೊಳೆಯಂಚಿನ ಕಂಟದಲ್ಲಿ ಗಿಡಗಂಟಿ ಸವರುತ್ತಿದ್ದಾಗ ದೇವಾನಂದ ಮಡಿವಾಳ ಕಾಲು ಜಾರಿ ಹೊಳೆಯ ಗುಂಡಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲೆಂದು ಮಾಬ್ಲೇಶ್ವರ ಮಡಿವಾಳ ನೀರಿಗೆ ಧುಮಿಕಿದ್ದು, ಇಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.