Site icon Vistara News

Drowned in river: ಕೆರೆಯಲ್ಲಿ ಈಜಾಡಲು ಹೋದ ನಾಲ್ವರು ನೀರುಪಾಲು; ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Drowned in river

ಬೆಂಗಳೂರು ಗ್ರಾಮಾಂತರ/ ಚಿಕ್ಕಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ‌ಯ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಅಮಾನಿಕೆರೆಯಲ್ಲಿ ಮೂವರು ಬಾಲಕರು (Drowned in river) ನೀರುಪಾಲಾಗಿದ್ದಾರೆ. ಕಾರ್ತಿಕ್ (16), ಧನುಷ್ (15), ಗುರುಪ್ರಸಾದ್ (6) ಮೃತ ದುರ್ದೈವಿಗಳು.

ಅಮಾನಿಕೆರೆಯಲ್ಲಿ ಮುಳುಗಿ ಬಾಲಕರು ಸಾವು

ಶನಿವಾರ ಮಧ್ಯಾಹ್ನ ಶಾಲೆ ಮುಗಿದ ಬಳಿಕ ಮೂವರು ಬಾಲಕರು ನಾಪತ್ತೆ ಆಗಿದ್ದರು. ರಾತ್ರಿಯೆಲ್ಲ ಪೋಷಕರು ಬಾಲಕರಿಗಾಗಿ ಹುಡುಕಾಟ ನಡೆಸಿದ್ದರು. ಆದರೆ ಬಾಲಕರ ಸುಳಿವು ಸಿಕ್ಕಿರಲಿಲ್ಲ. ಭಾನುವಾರ ಬೆಳಗ್ಗೆ ಕೆರೆಯಲ್ಲಿ ಬಾಲಕನೊಬ್ಬನ ಮೃತದೇಹ ಪತ್ತೆಯಾಗಿತ್ತು.

ನೀರುಪಾಲಾದ ಬಾಲಕರು

ಕೂಡಲೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಶೋಧ ಕಾರ್ಯ ನಡೆಸಿದಾಗ ಮತ್ತಿಬ್ಬರು ಬಾಲಕರ ಮೃತದೇಹವು ಪತ್ತೆಯಾಗಿದೆ. ನೀರಿನಲ್ಲಿ ಆಟವಾಡಲು ಹೋಗಿ ಮೂವರು ನೀರು ಪಾಲಾಗಿರುವ ಶಂಕೆ ವ್ಯಕ್ತವಾಗಿದೆ. ಮೂವರ ಮೃತ ದೇಹಗಳನ್ನು ಹೊರ ತೆಗೆದಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈಜಾಡಲು ಹೋದವನು ಸ್ನೇಹಿತರ ಕಣ್ಣೆದುರೇ ಮುಳುಗಿ ಸಾವು

ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಜಲಾಶಯದಲ್ಲಿ ಈಜಲು ಆಗದೇ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಹಮ್ಮದ್ ಯಾಸೀನ್ ಮೃತ ದುರ್ದೈವಿ. ವೀಕೆಂಡ್‌ ಕಾರಣಕ್ಕೆ ಮಹಮ್ಮದ್‌ ಯಾಸೀನ್‌ ತನ್ನ ಹತ್ತು ಜನ ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದ.

ಮೃತ ಮಹಮ್ಮದ್ ಯಾಸೀನ್

ಇದನ್ನೂ ಓದಿ: Murder Case: ಮನೆಗೆ ನುಗ್ಗಿದ ಹಂತಕರು ಬಾಯಿಗೆ ಬಟ್ಟೆ ತುರುಕಿ ಮಹಿಳೆಯ ಹತ್ಯೆ!

ಬೆಂಗಳೂರಿನ ಶ್ಯಾಂಪುರ ನಿವಾಸಿಯಾದ ಮಹಮ್ಮದ್ ಯಾಸೀನ್ ನೀರಿನಲ್ಲಿ ಈಜಾಡುತ್ತಿದ್ದಾಗ, ಹೊರ ಬರಲು ಆಗದೆ ಸ್ನೇಹಿತರ ಕಣ್ಣೆದುರೇ ಮುಳುಗಿದ್ದಾನೆ. ಕೂಡಲೇ ಆತನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಹಮ್ಮದ್ ಯಾಸೀನ್ ಉಸಿರು ಚೆಲ್ಲಿದ್ದಾರೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version