ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಈಜಲು ಹೋಗಿದ್ದ ಇಬ್ಬರು ಟಿಬೆಟಿಯನ್ ಬೌದ್ಧ ಸನ್ಯಾಸಿಗಳು ನೀರಲ್ಲಿ ಮುಳುಗಿ ಮೃತಪಟ್ಟ (drowned in water) ಘಟನೆ ಗುರುವಾರ ಮಧ್ಯಾಹ್ನ (ಡಿ.೨೯) ಸಂಭವಿಸಿದೆ.
ತಾಲೂಕಿನ ಟಿಬೆಟಿಯನ್ನು ಲಾಮಾ ಕ್ಯಾಂಪ್ ನಂ.೨ ರ ಲೋಸಲಿಂಗ್ ಬೌದ್ಧ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾದ ತಿನ್ಲೆ ನಾಮಗೆಲ್(೨೨), ಸಾಂಗೈ ವಾಂಜು(೨೩) ಮೃತರು.
ಮೂರುಜನ ಸ್ನೇಹಿತರು ಸೇರಿ ಬಾಚಣಕಿ ಜಲಾಶಯಕ್ಕೆ ಪಿಕ್‌ನಿಕ್‌ಗೆ ತೆರಳಿದ್ದರು. ಈ ವೇಳೆ ಜಲಾಶಯದಲ್ಲಿ ಮೂರು ಜನರು ಈಜಲು ಇಳಿದಿದ್ದು ಜಲಾಶಯ ತುಂಬಾ ಆಳವಿರುವ ಕಾರಣ ಈಜು ಬಾರದೆ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಈಜಿ ದಡ ಸೇರಿ ನಂತರ ತಮ್ಮ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸಿಪಿಐ ಸಿದ್ದಪ್ಪ ಸಿಮಾನಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು ಈ ಕುರಿತು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ |KGF 3 Actor Yash | ಕೆಜಿಎಫ್ನ ರಾಕಿ ಭಾಯ್, ಪಾಂಡ್ಯ ಬ್ರದರ್ಸ್ ಭೇಟಿ; ಕೆಜಿಎಫ್ 3 ಟ್ರೆಂಡಿಂಗ್