Site icon Vistara News

Drowned in water | ಅಬ್ಬಿಫಾಲ್ಸ್‌ಗೆ ಈಜಲು ತೆರಳಿದ್ದ ಯುವಕ ಮುಳುಗಿ ಸಾವು

Drowed in water Abby Falls Sahyadri Polytechnic College

ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಯಡೂರು ಗ್ರಾಮದ ಅಬ್ಬಿ‌ಫಾಲ್ಸ್‌ನಲ್ಲಿ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ (Drowned in water) ಮೃತಪಟ್ಟಿರುವ ಘಟನೆ ಬುಧವಾರ (ಜ.೪) ನಡೆದಿದೆ.

ತೀರ್ಥಹಳ್ಳಿ ಪಟ್ಟಣದ ಶಬರಿ ಹೋಟೆಲ್ ಮಾಲೀಕರ ಮಗ ರಿಷಬ್ (20) ಮೃತ ಯುವಕ ಎಂದು ತಿಳಿದುಬಂದಿದೆ. ಸಹ್ಯಾದ್ರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಓದುತ್ತಿದ್ದ ರಿಷಬ್ ಪರೀಕ್ಷೆ ಮುಗಿಸಿಕೊಂಡು ತನ್ನ ಇಬ್ಬರು ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್‌ಗೆ ಈಜಲು ತೆರಳಿದ್ದ. ಈ ಸಂದರ್ಭದಲ್ಲಿ ಅವಘಡ ಸಂಭವಿಸಿದೆ.

ಬಂಡೆಗಳ ನಡುವೆ ಮೃತದೇಹ ಸಿಲುಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಕ್ಷಣ ಪತ್ತೆಯಾಗಿರಲಿಲ್ಲ. ಬಹಳ ಹೊತ್ತು ಶೋಧ ನಡೆಸಿದಾಗ ಪತ್ತೆಯಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ | Compensation | ಸರ್ಕಾರದಿಂದ 10,000 ಕೋಟಿ ರೂ. ಪರಿಹಾರ ಕೇಳಿದ ವ್ಯಕ್ತಿ! ಕಾರಣವೇನು ಗೊತ್ತಾ?

Exit mobile version