ಶಿರಸಿ: ಈಜಲು ತೆರಳಿದ್ದ ಯುವಕ ನೀರಿನಲ್ಲಿ ಮುಳುಗಿ (Drowned in water) ಮೃತಪಟ್ಟಿದ್ದಾನೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ನೀರ್ನಳ್ಳಿ ಭಾಗದ ಪಾಂಡವರ ಹೊಳೆಯಲ್ಲಿ ಈ ಘಟನೆ ನಡೆದಿದೆ. ಮೇಘಾಲಯ ಮೂಲದ ಡಿಯೊಬೆಟ್ ಮಿಡ್ಕರ್ (22) ಮೃತ ದುರ್ದೈವಿ.
ಶಿರಸಿಯ ಹೊನ್ನೆಗದ್ದೆ ಗ್ರಾಮದ ಸ್ನೇಹಿತನ ಮನೆಗೆ ಮೇಘಾಲಯದಿಂದ ಡಿಯೊಬೆಟ್ ಮಿಡ್ಕರ್ ಬಂದಿದ್ದ. ಸ್ನೇಹಿತರೆಲ್ಲ ಸೇರಿ ಪಾಂಡವರ ಹೊಳೆಯಲ್ಲಿ ಈಜಾಡಲು ಹೋಗುವ ಎಂದು ಪ್ಲ್ಯಾನ್ ಮಾಡಿದ್ದಾರೆ. ಎಲ್ಲರೂ ಖುಷಿ ಖುಷಿಯಲ್ಲಿ ಹೊಳೆಗೆ ಹೋಗಿ ಧುಮ್ಮುಕಿದ್ದಾರೆ. ಆದರೆ ಡಿಯೊಬೆಟ್ ಮಿಡ್ಕರ್‌ಗೆ ನೀರಿನಿಂದ ಮೇಲೆ ಬರಲು ಆಗದೆ ಮುಳುಗಿದ್ದಾನೆ.
ಶಿರಸಿ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೃತ ಕುಟುಂಬಸ್ಥರು ಹಾಗೂ ಸ್ನೇಹಿತರ ಆಕ್ರಂದನ ಮುಗಿಲು ಮುಟ್ಟಿದೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ