ತುಮಕೂರು: ಇಲ್ಲಿನ ಕೊರಟಗೆರೆ ತಾಲೂಕಿನ ಮಲ್ಲೇಕಾವು ಗ್ರಾಮಸ್ಥರು ಪೋಸ್ಟ್ ಬೇಕು ಎಂದರೆ ಪೋಸ್ಟ್ ಮ್ಯಾನ್ ಮನೆಗೆ (Drunk postman) ಹೋಗಬೇಕು. ಈ ಗ್ರಾಮದ ಜನರು ಪೋಸ್ಟ್ ಮ್ಯಾನ್ ನೋಡಿಯೇ ಎರಡು ತಿಂಗಳು ಕಳೆದಿವೆ.
ಇದಕ್ಕೆ ಕಾರಣ ಪೋಸ್ಟ್ ಮ್ಯಾನ್ ಮದ್ಯ ಸೇವಿಸಿ ಮನೆಯಲ್ಲಿಯೇ ಬಿದ್ದುಕೊಂಡಿರುತ್ತಾನೆ ಎಂಬ ಆರೋಪ ಕೇಳಿಬಂದಿದೆ. ಕಳೆದ 2 ತಿಂಗಳಿಂದ ಯಾರ ಮನೆಗೂ ಪೋಸ್ಟ್ ನೀಡದ ಆರೋಪವೊಂದು ಈತನ ಮೇಲೆ ಕೇಳಿ ಬಂದಿದೆ. ಮಲ್ಲೇಕಾವು ಅಂಚೆ ಇಲಾಖೆಯ ಪೋಸ್ಟ್ ಮ್ಯಾನ್ ನಾಗೇಂದ್ರ ಕುಡಿತದ ದಾಸನಾಗಿದ್ದು, ಕಚೇರಿಯಲ್ಲಿ ನೂರಾರು ಪೋಸ್ಟ್ ಕಡತಗಳು ಉಳಿಕೆ ಆಗಿವೆ.
ಈತನ ವರ್ತನೆಗೆ ಜನರು ಹೈರಾಣಾಗಿದ್ದು, ತುರ್ತು ಸೇವೆಯ ಪೋಸ್ಟ್ ಕೂಡ ಸಿಗದೇ ಸಮಸ್ಯೆ ಎದುರಿಸುತ್ತಿದ್ದಾರೆ. ಆಧಾರ್ ಕಾರ್ಡ್, ಬ್ಯಾಂಕ್ ಚೆಕ್ ಬುಕ್ ಸೇರಿದಂತೆ ಇನ್ನಿತರ ಯಾವುದೇ ಪೋಸ್ಟ್ ಅನ್ನು ತುರ್ತಾಗಿ ತಲುಪಿಸಬೇಕು ಎಂದು ಕಳುಹಿಸಲಾಗಿದ್ದರೂ ಮನೆಗೆ ಬರುವುದಿಲ್ಲ. ಹೀಗಾಗಿ ನಾಗೇಂದ್ರನ ಮನೆಗೇ ಹೋಗಿ ತಂದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗೇಂದ್ರನ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅನೇಕ ಬಾರಿ ಗ್ರಾಮಸ್ಥರು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ | Suttur jatre | ಮೈಸೂರು ಸುತ್ತೂರು ಜಾತ್ರೆಗೆ ದಿನಗಣನೆ; ಕೃಷಿಮೇಳದೊಂದಿಗೆ ಜನಜಾಗೃತಿ ಯಾತ್ರೆಗೆ ಸಿಎಂ ಚಾಲನೆ