Site icon Vistara News

Drunken teacher | ಡ್ಯೂಟಿ ಟೈಮಲ್ಲೇ ಮತ್ತೇರಿದ ಮಾಸ್ಟರ್; ಶಾಲೆ ಜಗುಲಿಯಲ್ಲೇ ಮಲಗಿ ಹೊರಳಾಟ; ಇದು ಅಲಂಗಾರು ಶಾಲೆಯ ಗೋಳಾಟ

teacher drunk ಉಡುಪಿ ಮದ್ಯವ್ಯಸನಿ ಶಾಲಾ ಶಿಕ್ಷಕ

ಉಡುಪಿ: ಶಾಲೆಯ ಶಿಕ್ಷಕರೊಬ್ಬರು ಕಂಠಪೂರ್ತಿ ಕುಡಿದು (Drunken teacher) ಶಾಲೆಯ ಜಗಲಿಯಲ್ಲಿಯೇ ಮಲಗಿದ ಪ್ರಕರಣವೊಂದು ಪೆರ್ಡೂರು ಗ್ರಾಮದ ಅಲಂಗಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವರದಿಯಾಗಿದೆ.

ಕೃಷ್ಣಮೂರ್ತಿ ಎಂಬುವವರೇ ಕಂಠಪೂರ್ತಿ ಕುಡಿದು ಜಗುಲಿಯಲ್ಲಿ ಮಲಗಿದ ಶಿಕ್ಷಕ. ಶಾಲೆಯ ಕೊಠಡಿಯಲ್ಲಿ ಮಕ್ಕಳು ಅವರ ಪಾಡಿಗೆ ಇದ್ದರೆ, ಈ ಶಿಕ್ಷಕ ಮಾತ್ರ ಮದ್ಯದ ಅಮಲಿನಲ್ಲಿ ತೇಲಾಡುತ್ತಾ ಶಾಲೆ ಆವರಣದ ಜಗುಲಿಯಲ್ಲಿಯೇ ಹೊರಳಾಡುತ್ತಾ ಮಲಗಿದ್ದರು.

ಹೀಗೆ ಮದ್ಯ ಕುಡಿದು ಮಲಗಿರುವ ದೃಶ್ಯವನ್ನು ಸ್ಥಳೀಯರೊಬ್ಬರು ಚಿತ್ರೀಕರಿಸಿಕೊಂಡಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲಿಯೂ ಹರಿಬಿಟ್ಟಿದ್ದಾರೆ. ಈ ವಿಡಿಯೊ ಈಗ ವೈರಲ್‌ ಆಗಿದೆ. ಮಕ್ಕಳ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಶಾಲಾ ಅವಧಿಯಲ್ಲಿಯೇ ಕುಡಿದು, ಶಾಲಾ ಆವರಣದಲ್ಲಿಯೇ ಮಲಗಿರುವುದು ಸ್ಥಳೀಯರು ಸೇರಿದಂತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಶಿಕ್ಷಕನನ್ನು ಕೂಡಲೇ ಅಮಾನತು ಮಾಡುವಂತೆ ಪೆರ್ಡೂರು ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು, ಸಾಮಾಜಿಕ ಕಾರ್ಯಕರ್ತರು ಆಗ್ರಹಿಸಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಮನವಿ ಸಲ್ಲಿಸಲಾಗಿದೆ.

ಇದನ್ನೂ ಓದಿ | Protest at Belagavi | ಸುವರ್ಣ ಸೌಧದ ಎದುರು ವಿವಿಧ ಸಂಘಟನೆಗಳಿಂದ ಮುಂದುವರಿದ ಪ್ರತಿಭಟನೆ

Exit mobile version