Site icon Vistara News

Earthquake In Karnataka | ಬಾಗಲಕೋಟೆಯಲ್ಲಿ ಕಂಪಿಸಿದ ಭೂಮಿ, ಭಯದಲ್ಲಿ ಸ್ಥಳೀಯರು

Earthquake In Karnataka

ಬಾಗಲಕೋಟೆ: ಗುಮ್ಮಟನಗರಿ ವಿಜಯಪುರದಲ್ಲಿ ಶನಿವಾರ (ಜು 9) ಭೂಮಿ ಕಂಪಿಸಿದ (Earthquake In Karnataka) ಬೆನ್ನಲ್ಲೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ಭಾಗದಲ್ಲಿ ಬೆಳಗ್ಗೆ ಭೂಮಿ ಕಂಪಿಸಿದೆ ಎಂದು ತಿಳಿದು ಬಂದಿದೆ.

ತಾಲೂಕಿನ ತುಬಚಿ ಗ್ರಾಮದಲ್ಲಿ ಎರಡರಿಂದ ಮೂರು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎಂದು ಗ್ರಾಮದ ಸ್ಥಳೀಯ ನಿವಾಸಿ ಆನಂದ್ ದೂಪದಾಳ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ | Earthquake In Karnataka | ಕೊಡಗು ಭೂ ಕಂಪನ: ಹಿರಿಯ ಭೂ ವಿಜ್ಞಾನಿಗಳು ಹೇಳೋದೇನು?

ಜಮಖಂಡಿ ನಗರದ ಹುಡ್ಕೊ ಕಾಲನಿ ಬಳಿ ಕೂಡ ಭೂ ಕಂಪನದ ಅನುಭವ ಆಗಿದೆ. ಬೆಳಗ್ಗೆ 6 ಗಂಟೆ 21 ನಿಮಿಷದ ವೇಳೆ ಕಂಪನವಾಗಿರುವುದಾಗಿ ಸ್ಥಳೀಯ ನಿವಾಸಿ ಆನಂದ ಕಾಳಪ್ಪನವರ ಮಾಹಿತಿ ನೀಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾಡಳಿತ ಮಾಹಿತಿ ಕಲೆ ಹಾಕುತ್ತಿದೆ.

ಇದನ್ನೂ ಓದಿ | ವಿಜಯಪುರದಲ್ಲಿ ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ, ಜನತೆಯಲ್ಲಿ ಆತಂಕ

Exit mobile version