Site icon Vistara News

Earthquake | ವಿಜಯಪುರದ ಉಕ್ಕಲಿ ಗ್ರಾಮದಲ್ಲಿ ಭೂಕಂಪನ; ಗಾಬರಿಯಾಗಿ ಮನೆಗಳಿಂದ ಹೊರಬಂದ ಜನ

Earthquake

ವಿಜಯಪುರ: ಜಿಲ್ಲೆಯಲ್ಲಿ ಸತತ ಎರಡನೇ ದಿನವೂ ಭೂಮಿ (Earthquake) ಕಂಪಿಸಿದೆ. ಶನಿವಾರ ರಾತ್ರಿ ಜಿಲ್ಲೆಯ ಕೆಲವೆಡೆ ಭೂಮಿ ಕಂಪಿಸಿದ ಅನುಭವಾಗಿತ್ತು. ಇದೇ ಅನುಭವ ಭಾನುವಾರ ಕೂಡ ಆಗಿದೆ. ಹೀಗಾಗಿ ಜನರು ಆತಂಕಗೊಂಡಿದ್ದಾರೆ.

ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಉಕ್ಕಲಿ ಗ್ರಾಮದಲ್ಲಿ ಭಾನುವಾರ ಸಂಜೆ 6:27ಕ್ಕೆ ಭೂಮಿ ಕಂಪಿಸಿದ್ದು, ರಿಕ್ಟರ್‌ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿದೆ. ಗ್ರಾಮದಿಂದ 1.7 ಕಿ.ಮೀ ದೂರದಲ್ಲಿ ಭೂಕಂಪನ ಕೇಂದ್ರ ಬಿಂದು ದಾಖಲಾಗಿದ್ದು, ಭೂಮಿಯ 5 ಕಿ.ಮೀ ಆಳದಲ್ಲಿ ಕಂಪನದ ಅಲೆಗಳು ಸೃಷ್ಟಿಯಾಗಿವೆ. ಭೂಮಿ ಕಂಪಿಸುತ್ತಿದ್ದಂತೆ ಗ್ರಾಮದ ಜನರು ಮನೆಗಳಿಂದ ಭಯಭೀತರಾಗಿ ಹೊರಗೆ ಓಡಿ ಬಂದಿದ್ದು, ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.

ಶನಿವಾರ ರಾತ್ರಿ 8.17ಕ್ಕೆ ವಿಜಯಪುರದ ಬಸವನಗರ, ಗಣೇಶ್‌ ನಗರದ ಹಲವೆಡೆ ಭೂಮಿ ಕಂಪಿಸಿದ್ದರಿಂದ ಆತಂಕಗೊಂಡ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದರು. ಈವರೆಗೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಸುಮಾರು 17 ಬಾರಿ ಭೂಮಿ ಕಂಪಿಸಿದ್ದರಿಂದ ಜನರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ | ಉತ್ಸವಗಳಿಂದ ಜನ ವೋಟು ಹಾಕುತ್ತಾರೆಂಬುವುದು ಭ್ರಮೆ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಗೇಲಿ

Exit mobile version