ವಿಜಯಪುರ: ವಿಜಯಪುರ ನಗರ ಹಾಗೂ ಹೊರವಲಯದಲ್ಲಿ ಗುರುವಾರ ಮತ್ತೆ ಭೂಮಿ ಕಂಪಿಸಿದ ಅನುಭವ ಆಗಿದೆ. ಜೋರಾದ ಸದ್ದಿನ ಜತೆಗೆ ಭೂಮಿ ಕಂಪಿಸಿದ್ದರಿಂದ (Earthquake) ನಗರದ ಜನ ಬೆಚ್ಚಿಬಿದ್ದಿದ್ದಾರೆ.
ಸಂಜೆ 5.56 ಗಂಟೆಗೆ ಭೂಮಿ ನಡುಗಿದ ಅನುಭವವಾಗಿದ್ದು, ಸ್ಫೋಟದ ರೀತಿಯಲ್ಲಿ ಸದ್ದು ಕೇಳಿಸಿದೆ. ಗೋಳಗುಮ್ಮಟ ಪ್ರದೇಶ, ಕೀರ್ತಿ ನಗರ, ಜಲನಗರ, ತೊರವಿ, ಗಣೇಶ ನಗರ, ಮಹಲ್ ಭಾಗದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಮೇಲಿಂದ ಮೇಲೆ ಗುಮ್ಮಟ ನಗರಿಯಲ್ಲಿ ಭೂಕಂಪನ ಸಂಭವಿಸುತ್ತಿರುವುದರಿಂದ ಜನರು ಭಯಭೀತರಾಗಿದ್ದಾರೆ.
ಇದನ್ನೂ ಓದಿ | Panchamasali Reservation | ಪಂಚಮಸಾಲಿ ಮೀಸಲಾತಿಗೆ ಹೈಕೋರ್ಟ್ ಬ್ರೇಕ್: ಯಥಾಸ್ಥಿತಿ ಕಾಯ್ದುಕೊಳ್ಳಲು ಸೂಚನೆ