Site icon Vistara News

ED Raid | ಅಕ್ರಮ ಆಸ್ತಿ ಗಳಿಕೆ ಪ್ರಕರಣ: ಇಡಿಯಿಂದ ಮಾಜಿ ಕಾರ್ಪೊರೇಟರ್‌ 3.35 ಕೋಟಿ ರೂ. ಆಸ್ತಿ ಜಪ್ತಿ

ED Raid

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ನಗರದ ಆಜಾದ್ ನಗರದ ಮಾಜಿ ಕಾರ್ಪೊರೇಟರ್ ಸಿ.ಜಿ.ಗೌರಮ್ಮ ಅವರ 3.35 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ(ED Raid) ಜಪ್ತಿ ಮಾಡಿದೆ.

ಗೌರಮ್ಮ ಮತ್ತು ಪತಿ ಸಿ. ಗೋವಿಂದರಾಜು ವಿರುದ್ಧ ಕರ್ನಾಟಕ ಲೋಕಾಯುಕ್ತ ಪೊಲೀಸರು ಸಲ್ಲಿಸಿದ ಚಾರ್ಜ್‌ಶಿಟ್‌ ಆಧರಿಸಿ ಇಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಗೌರಮ್ಮ ಕಾರ್ಪೊರೇಟರ್ ಆಗಿದ್ದಾಗ ಅಧಿಕಾರ ದುರ್ಬಳಕೆ ಮಾಡಿಕೊಂಡು ಪತಿ ಗೋವಿಂದರಾಜು ಜತೆ ಶಾಮೀಲಾಗಿ ಅಕ್ರಮ ಆದಾಯ ಗಳಿಸಿದ್ದರು. 2010ರಿಂದ 2013ರವರೆಗೆ 3.46 ಕೋಟಿ ರೂ.ಗಳ ಅಕ್ರಮ ಆಸ್ತಿ ಸಂಪಾದಿಸಿದ್ದು, ಇದರಲ್ಲಿ ಕೃಷಿ ಭೂಮಿ, ವಸತಿ ಪ್ಲಾಟ್‌ ಗಳು ಮತ್ತು ವಾಣಿಜ್ಯ ನಿವೇಶನಗಳು ಸೇರಿವೆ ಎಂದು ತಿಳಿಸಲಾಗಿದೆ.

ಇದನ್ನೂ ಓದಿ | ಇಡಿ ಶೇಮ್​ ಶೇಮ್​ ಎಂದು ಕೂಗಿದ ಕಾಂಗ್ರೆಸ್​ ಕಾರ್ಯಕರ್ತರು; ಮತ್ತೆ ಪ್ರತಿಭಟನೆ ಶುರು

Exit mobile version