Site icon Vistara News

ED Raid: ಬೈಜೂಸ್‌ ಮಾಲೀಕ ರವೀಂದ್ರನ್‌ ಮನೆ ಮೇಲೆ ಇ.ಡಿ ದಾಳಿ; ಡಿಜಿಟಲ್ ಡೇಟಾ, ದಾಖಲೆ ಸೀಜ್‌

ಬೆಂಗಳೂರು: ಜಾರಿ ನಿರ್ದೇಶನಾಲಯಕ್ಕೆ (ED Raid In Bengaluru) ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಶನಿವಾರ (ಏಪ್ರಿಲ್‌ 29) ಎಜುಟೆಕ್‌ ಕಂಪೆನಿ ಆಗಿರುವ ಬೈಜೂಸ್‌ ಸಂಸ್ಥೆಯ ಮೇಲೆ ಇ.ಡಿ. ದಾಳಿ ನಡೆಸಿದೆ. ಬೈಜೂಸ್‌ ಸಂಸ್ಥೆಯ ಮಾಲೀಕ ಬೈಜು ರವೀಂದ್ರನ್‌ ಅವರ ಬೆಂಗಳೂರಿನಲ್ಲಿರುವ ಮನೆ ಹಾಗೂ 2 ಕಚೇರಿಗಳ ಮೇಲೆ ಇ.ಡಿ. ದಾಳಿ ನಡೆಸಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಉಲ್ಲಂಘನೆ ಮಾಡಿರುವ ಆರೋಪದಡಿ ಈ ದಾಳಿ ನಡೆದಿದ್ದು, ಡಿಜಿಟಲ್ ಡೇಟಾ ಹಾಗೂ ಕೆಲ ದಾಖಲೆಗಳು ಪತ್ತೆ ಆಗಿದೆ. ಅವುಗಳನ್ನು ಇ.ಡಿ. ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಥಿಂಕ್ ಆ್ಯಂಡ್ ಪ್ರೈವೇಟ್ ಲಿ. ಕಂಪನಿ ಮೇಲೂ ದಾಳಿ ಮಾಡಲಾಗಿದೆ. ಇನ್ನು ಈ ಹಿಂದೆ ಹಲವು ಬಾರಿ ಬೈಜು ರವೀಂದ್ರನ್‌ಗೆ ಸಮನ್ಸ್‌ ಜಾರಿ ಮಾಡಿದ್ದರೂ ಅವರು ಹಾಜರಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Karnataka Election 2023: ಮೂಡಿಗೆರೆ ಕ್ಷೇತ್ರಕ್ಕೆ ಅನುದಾನ ತರಲು ಬಾಂಬೆ, ಡೆಲ್ಲಿಗೆ ಹೋಗುತ್ತೇನೆ: ನಯನ ಮೋಟಮ್ಮ

ಅಂದಹಾಗೆ, 2009ರಲ್ಲಿ ಬೈಜೂಸ್‌ ಶುರು ಮಾಡಿದ ಬೈಜು ರವೀಂದ್ರನ್‌ ಅವರು, ಬಳಿಕ 2011ರಲ್ಲಿ ಥಿಂಕ್ ಆ್ಯಂಡ್ ಪ್ರೈವೇಟ್ ಲಿ. ಕಂಪನಿಯನ್ನು ಶುರು ಮಾಡಿ, 2015ರಲ್ಲಿ ಬೈಜೂಸ್‌ ಹೆಸರಲ್ಲಿ ಲರ್ನಿಂಗ್‌ ಆ್ಯಪ್‌ವೊಂದನ್ನು ಬಿಡುಗಡೆ ಮಾಡಿದರು. ಕೇವಲ ಮೂರು ವರ್ಷದಲ್ಲಿ 20 ಲಕ್ಷ ವಿದ್ಯಾರ್ಥಿಗಳು ಈ ಆ್ಯಪ್‌ನ ಬಳಕೆದಾರರಾದರು.

2011- 2023ರ ಅವಧಿಯಲ್ಲಿ ಕಂಪನಿಯು ಅಂದಾಜು 28,000 ಕೋಟಿ ರೂ.ಗಳಷ್ಟು ವಿದೇಶಿ ನೇರ ಹೂಡಿಕೆಯನ್ನು ಸ್ವೀಕರಿಸಿದೆ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಬೈಜು ರವೀಂದ್ರನ್ ಮತ್ತು ಅವರ ಸಂಸ್ಥೆ ಥಿಂಕ್ ಆ್ಯಂಡ್ ಲರ್ನ್ ಪ್ರೈವೇಟ್ ಲಿಮಿಟೆಡ್ ವಿದೇಶಿ ನೇರ ಹೂಡಿಕೆ ಸೇರಿ ಜಾಹೀರಾತು ಮತ್ತು ಮಾರ್ಕೆಟಿಂಗ್ ವೆಚ್ಚಗಳ ಹೆಸರಿನಲ್ಲಿ ಸುಮಾರು 944 ಕೋಟಿ ರೂಪಾಯಿಗಳನ್ನು ಕಾಯ್ದಿರಿಸಿದೆ ಎನ್ನಲಾಗಿದೆ.

ಇತ್ತ ಇ.ಡಿ. ದಾಳಿ ಸಂಬಂಧ ಬೈಜೂಸ್‌ ಸಂಸ್ಥೆಯ ಕಾನೂನು ತಂಡದವರು ಪ್ರತಿಕ್ರಿಯೆ ನೀಡಿದ್ದು, ಇ.ಡಿ ಅಧಿಕಾರಿಗಳ ಪರಿಶೀಲನೆಯು ಫೆಮಾ ಅಡಿಯಲ್ಲಿ ನಡೆದಿರುವ ಸಾಮಾನ್ಯ ವಿಚಾರಣೆ ಇದಾಗಿದೆ ಅಷ್ಟೇ. ಅಧಿಕಾರಿಗಳ ಈ ಕಾರ್ಯಾಚರಣೆಯಲ್ಲಿ ಅವರು ಕೇಳಿದ ಎಲ್ಲ ಅಗತ್ಯವಿರುವ ಮಾಹಿತಿಯನ್ನು ಒದಗಿಸಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Election 2023: ಸಿದ್ದರಾಮಯ್ಯಗೆ ಸನ್‌ಸ್ಟ್ರೋಕ್‌; ಕಾರಲ್ಲಿ ನಿಂತು ಕೈಬೀಸುವಾಗಲೇ ಕುಸಿದುಬಿದ್ದರು

ಬೈಜೂಸ್‌ನಲ್ಲಿ ಉದ್ಯೋಗ ಕಡಿತ

ಆನ್‌ಲೈನ್‌ ಶಿಕ್ಷಣ ಸಂಸ್ಥೆ ಬೈಜೂಸ್‌ (Byjus) ಇತ್ತೀಚೆಗಷ್ಟೇ 1000 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಸ್ಟ್ರಾಟಜಿ, ತಂತ್ರಜ್ಞಾನ, ಪ್ರಾಡಕ್ಟ್‌ ವಿಭಾಗದ ಸಿಬ್ಬಂದಿ ಕೆಲಸ ಕಳೆದುಕೊಂಡಿದ್ದರು. ಹಲವು ಉಪಾಧ್ಯಕ್ಷರು 1 ಕೋಟಿ ರೂ. ವೇತನ ಪಡೆಯುತ್ತಿದ್ದವರು, ಆಗ ನೌಕರಿಯನ್ನು ಕಳೆದುಕೊಂಡಿದ್ದರು. ಬೈಜೂಸ್‌ ಕಳೆದ ವರ್ಷ (2022) ಉದ್ಯೋಗ ಕಡಿತವನ್ನು ಆರಂಭಿಸಿತ್ತು. ಹೊಸ ಗ್ರಾಹಕರ ಸಂಖ್ಯೆ ಕುಸಿದಿರುವ ಹಿನ್ನೆಲೆಯಲ್ಲಿ ಬೈಜೂಸ್‌ ತನ್ನ ವೆಚ್ಚ ನಿಯಂತ್ರಣದ ಭಾಗವಾಗಿ ಉದ್ಯೋಗ ಕಡಿತಕ್ಕೆ ಮುಂದಾಗಿತ್ತು. 2022ರ ಅಕ್ಟೋಬರ್‌ನಲ್ಲಿ 2,500 ಉದ್ಯೋಗಿಗಳನ್ನು ವಜಾಗೊಳಿಸಿತ್ತು. ಆ ಬಳಿಕ 2023ರಲ್ಲಿ 1000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.

Exit mobile version