Site icon Vistara News

ED Raid: ಕೊಚಿಮುಲ್‌ ಕಚೇರಿ, ಕಾಂಗ್ರೆಸ್‌ ಶಾಸಕರ ಮನೆ ಮೇಲೆ ಇಡಿ ದಾಳಿ

kochimul

ಕೋಲಾರ: ಕೊಚಿಮುಲ್ (Kolar- Chikkaballapura District Co-operative Milk Producers Union Ltd – KOCHIMUL) ಡೈರಿ ಕಚೇರಿ ಹಾಗೂ ಅದರ ಅಧ್ಯಕ್ಷ, ಹಾಲಿ ಕಾಂಗ್ರೆಸ್‌ ಶಾಸಕರ ಮನೆಗಳ ಮೇಲೆ ಮೇಲೆ ಇಂದು ಮುಂಜಾನೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ (ED Raid) ನಡೆಸಿದ್ದಾರೆ.

25 ಜನ ಇಡಿ ಸಿಬ್ಬಂದಿಗಳ ತಂಡದಿಂದ ದಾಳಿ ನಡೆದಿದೆ. ಇಂದು ಬೆಳಗಿನ ಜಾವ ಮೂರು ಗಂಟೆಗೆ ಕೊಚಿಮುಲ್ ಡೈರಿ ಮೇಲೆ ಇಡಿ ತಂಡ ದಾಳಿಯಿಟ್ಟು, ಡೈರಿ ಕಚೇರಿಯ ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದೆ.

ಇತ್ತೀಚಿಗೆ ಕೊಚಿಮುಲ್ ನೇಮಕಾತಿ ಹಗರಣ ನಡೆದಿತ್ತು. ಈ ನೇಮಕಾತಿ ಪ್ರಕ್ರಿಯೆಯಲ್ಲಿ ಸಂಬಂಧಪಟ್ಟವರು ಒಂದು ಸೀಟಿಗೆ 40ರಿಂದ 50 ಲಕ್ಷ ರೂಪಾಯಿ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಆ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗಿದೆ. ಡೈರಿಯ ಒಳಗೆ ಯಾರನ್ನೂ ಬಿಡದಂತೆ ಎಲ್ಲಾ ಗೇಟ್‌ಗಳನ್ನು ಲಾಕ್ ಮಾಡಲಾಗಿದೆ. ಡೈರಿಯಲ್ಲಿರುವ ಮಹತ್ವದ ದಾಖಲೆಗಳನ್ನು ತಂಡ ಪರಿಶೀಲನೆ ನಡೆಸುತ್ತಿದೆ. ಡೈರಿ ಸುತ್ತಮುತ್ತ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ..

ಕೋಚುಮುಲ್ ಡೈರಿ ಅಧ್ಯಕ್ಷ ಹಾಗೂ ಹಾಲಿ ಕಾಂಗ್ರೆಸ್ ಶಾಸಕ ಕೆ.ವೈ ನಂಜೇಗೌಡ ಮನೆ ಮೇಲೂ ಇಡಿ ದಾಳಿ ನಡೆಸಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಟೇಕಲ್ ಹೋಬಳಿ ಕೋಮ್ಮನಹಳ್ಳಿ ಗ್ರಾಮದಲ್ಲಿ ಶಾಸಕರ ನಿವಾಸವಿದೆ. ಬೆಳಗ್ಗೆ 6 ಗಂಟೆಯಿಂದ ಇಡಿ ಅಧಿಕಾರಿಗಳ ತಂಡದಿಂದ ಮನೆಯಲ್ಲಿನ ಮಹತ್ವ ದಾಖಲೆ ಪರಿಶೀಲನೆ ನಡೆಯುತ್ತಿದೆ. ಮನೆಯ ಸುತ್ತಲೂ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಇದನ್ನೂ ಓದಿ: ED Raid: ʼಜಲ್ ಜೀವನ್ ಮಿಷನ್’ ಅಕ್ರಮ; ರಾಜಸ್ಥಾನದ 25 ಸ್ಥಳಗಳಲ್ಲಿ ಇಡಿ ದಾಳಿ

Exit mobile version